‘ನಾಲಿಗೆ, ನೆತ್ತರು ಮತ್ತು ಬುದ್ಧ’ ಚಂದ್ರಪ್ರಭ ಕಠಾರಿ ಅವರ ಕತಾಸಂಕಲನ. ಈ ಕೃತಿಗೆ ಎಂ ನಾಗರಾಜ ಶೆಟ್ಟಿ ಅವರ ಮುನ್ನುಡಿ ಬರಹವಿದೆ. ಕತೆಗಳ ಕುರಿತು ಬರೆಯುತ್ತಾ ‘ಚಂದ್ರಪ್ರಭ ಕಠಾರಿಯವರ ಕತೆಗಳು ನಗರ ಕೇಂದ್ರಿತವಾಗಿದ್ದು ಸಮಕಾಲೀನ ಘಟನೆಗಳಿಗೆ ಕನ್ನಡಿ ಹಿಡಿಯುತ್ತವೆ. ಅವರ ಕತೆಗಳಿಗೆ ಭೂತಕಾಲದ ಹಂಗಿಲ್ಲ. ʼಕಾಡುವ ಅಪ್ಪʼ ಕತೆಯಲ್ಲಿ ಹಳೆಯ ಘಟನೆಗಳ ಪರಿಶೀಲನೆ ಇದೆ. ಆದರೆ ಅದು ಕೂಡಾ ವರ್ತಮಾನದ ಕೆದಕು. ಹಳ್ಳಿಯ ಪ್ರಸ್ತಾಪವು ಅವರ ಕತೆಗಳಲ್ಲಿ ಕ್ವಚಿತ್ತಾಗಿ ಬರುತ್ತದೆ. ʼಗುಳೇ ಎದ್ದ ಹನುಮʼ ಕತೆಯಲ್ಲಿ ಹಳ್ಳಿಯಿಂದ ನಗರಕ್ಕೆ ಬರುವ ಹನುಮನಿಗೆ ನಗರ ರಾಕ್ಷಸ ರೂಪ ತಾಳಿ ನುಂಗಲು ಬರುವಂತೆ ಕಂಡರೆ, ʼಅಂಬೇಡ್ಕರ್ ಕಾಲೋನಿʼ ʼಬಟವಾಡೆʼ ಕತೆಗಳಲ್ಲಿ ನಗರದಲ್ಲಿ ವಾಸ ಮಾಡಲು ಕಟ್ಟಡ ಕಾರ್ಮಿಕರು ಪಡುವ ಪಡಿಪಾಟಲಿನ ಚಿತ್ರಣವಿದೆ. ʼಯಾವ ಹೊತ್ತಿಗಾದರೂ ಮೈ ಮೇಲೆ ಬೀಳುವುದೋ ಎಂಬ ದಿಗಿಲು ಹುಟ್ಟಿಸುವಂತಿದ್ದ ಕಾಂಕ್ರೀಟು ಗಗನಚುಂಬಿ ಕಟ್ಟಡಗಳ ಮಧ್ಯೆ ಇರುಕಿಸಿಕೊಂಡು ಏದುಸಿರುಬಿಡುವ, ತಗಡಿನ ಶೆಡ್ಡು ಮನೆಗಳಲ್ಲಿ ವಾಸ ಮಾಡುವವರ ಕುರಿತ ಮಾನವೀಯ ಕಾಳಜಿಯ ಕತೆಗಳಿವು ಎಂದಿದ್ದಾರೆ.
ಲೇಖಕ ಚಂದ್ರಪ್ರಭ ಕಠಾರಿ ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ಕತೆ, ಕವನ, ನಾಟಕ ಬರೆಯುವುದು ಹವ್ಯಾಸ. ಕಠಾರಿ ಕತೆಗಳು ( ಇಲ್ಲಿಯ ಹಲವು ಕತೆಗಳು ಸಂಕ್ರಮಣ ಸಾಹಿತ್ಯ ಪತ್ರಿಕೆ, ಈ ಭಾನುವಾರ, ಕರ್ನಾಟಕ ಸಂಘ, ಮುಂಬೈ, ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ಕೋಲ್ಮಿಂಚು, ಕಥಾ ಸರ್ಧೆಗಳಲ್ಲಿ ಬಹುಮಾನ ಪಡೆದಿವೆ.) ಮತ್ತು ಅಂಬು ( ನಾಟಕ) ಪ್ರಕಟವಾಗಿವೆ. ...
READ MORE