ನಾಕನೇ ನೀರು

Author : ಎಚ್. ನಾಗವೇಣಿ

Pages 216

₹ 180.00




Year of Publication: 2019
Published by: ಪಲ್ಲವ ಪ್ರಕಾಶನ

Synopsys

ಲೇಖಕಿ ಎಚ್. ನಾಗವೇಣಿ ಅವರ ಕತಾ ಸಂಕಲನ ನಾಕನೇ ನೀರು. ಕರ್ನಾಟಕದ ಕರಾವಳಿಗೆ ಸಾಂಸ್ಕೃತಿಕ ಸಿರಿತನವಿದೆ.ಹಲವು ಜಾತಿ- ದರ್ಮಗಳ,ಹಲವು ಬಾಷಿಕ ವಲಯಗಳು ಬೆರೆತ ಒಂದು ತನ ಅದು.ಕಡಲು ಮತ್ತು ಕಾಡು ಪ್ರೇರಿಪಿಸಿದ ಕೂಡಾವಳಿಯ ಬದುಕದು.ಅನ್ಯಾಯ ಸಂಸ್ಕೃತಿಗಳನ್ನು ತನ್ನದಾಗಿಸಿಕೊಳ್ಳುತ್ತ,ಆಧುನಿಕತೆಯನ್ನು ದಕ್ಕಿಸಿಕೊಳ್ಳುತ್ತ ಹೊಸ ಸತ್ವದಿಂದ ಕೂಡಿದ್ದು.ಆದರೆ ಈಗದು ಸಾಂಸ್ಕೃತಿಕ ಏಕಸ್ವಾಮ್ಯದ ದಾಳಿಯಲ್ಲಿ ತನ್ನತನವನ್ನು ಕಳೆದುಕೊಂಡು ಹಿಸಿಬ್ರಮೆಗಳಲ್ಲಿ ನರಳುತ್ತಿದೆ.ಈ ಕಷ್ಟಕಾಲದಲ್ಲಿ ಮೂರು ದಶಕಗಳ ಹಿಂದೆ ನಾಗವೇಣಿ ಅವರು ಬರೆದ ಕತೆಗಳ ಮರು ಓದಿಗೆ ಮಹತ್ವವಿದೆ.ಈ ಕತೆಗಳು ನಮ್ಮ ವಿಸ್ಮೃತಿಯೆದುರು ಹಿಡಿದ ಕನ್ನಡಿಯಾಗಿದೆ .ತುಳುನಾಡು ನವೂದಯ ಕಾಲದಿಂದಲೂ ಕನ್ನಡಕಥನಗಳಲ್ಲಿ ದಾಖಲಾಗುತ್ತಾ ಬಂದಿದೆ ಆದರೆ ಅವರ ಕತೆಗಳನ್ನು ಓದುವಾಗ ,ಈ ಕತೆಗಳಿಲ್ಲದಿದ್ದರೆ ಇಂತಹ ಸಾಂಸ್ಕೃತಿಕ ನಿಬಿಡತೆಯು ಪಣ್ತಪ್ಪಿಯೇ ಉಳಿದುಬಿಡುತ್ತಿತ್ತು ಅನೀಸುತ್ತಿದೆ .ನಾಗವೇಣಿ ಕಥನದ ತ್ರಾಣವಿರುವುದು ಜನಬದುಕಿನ ತಳಾದಿಯಲ್ಲಿ ಬಿಗಿದ ಬೇರಿನಂತಿರುವ ಸೌಹಾರ್ದತೆಯ ಶೋಧನೆಯಲ್ಲಿ. ಹಣ್ತನದ ಸಂಕಟ- ಸಂಬ್ರಮಗಳ ತಾದಾತ್ಮ್ಯದಲ್ಲಿ ಲೋಕಮೀಮಾಂಸೆಯನ್ನು ಮಂಡಿಸುತ್ತದೆ. ಕೃತಿಯ ಪರಿವಿಡಿಯಲ್ಲಿ ಇನಾಮು, ಮಾಯಿಲನ ಭೂತ, ದಾಸಿ, ಕಸಬರಿಕೆ, ಬಸಿರು, ನಾಕನೇ ನೀರು, ಬೆಲ್ಲ, ಗಾಳ, ಸೀಮಂತ ಸೇರಿ ಅನೇಕ ಕತೆಗಳು ಈ ಕೃತಿಯಲ್ಲಿವೆ.

About the Author

ಎಚ್. ನಾಗವೇಣಿ
(29 November 1962)

ಎಚ್. ನಾಗವೇಣಿಯವರು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕಿನ ಹೊನ್ನಕಟ್ಟೆಯಲ್ಲಿ 29-11-1962 ರಂದು ಜನಿಸಿದರು. ಕರಾವಳಿಯ ಸಾಂಸ್ಕೃತಿಕ ವಿಭಿನ್ನತೆಯ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪಲ್ಲಟಗಳನ್ನು ಶೋಧಿಸುವ ಉತ್ತಮ ಕಥೆಗಳನ್ನು ನೀಡುತ್ತ ಡಾ. ಎಚ್. ನಾಗವೇಣಿ ಸಾಹಿತ್ಯಲೋಕದ ಗಮನ ಸೆಳೆದಿದ್ದಾರೆ. ವಿಜ್ಞಾನ, ಗ್ರಂಥಾಲಯ ವಿಜ್ಞಾನ, ಸಾಹಿತ್ಯ ಮತ್ತು ಶಿಕ್ಷಣ ಇವೆಲ್ಲದರಲ್ಲಿ ಪದವಿಗಳನ್ನು ಪಡೆದಿರುವ ಅವರು, ಈಗ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು- ನಾಲ್ಕನೇ ನೀರು, ಮೀಯುವ ಆಟ, ಕಡಲು, ವಸುಂಧರೆಯ ಗ್ಯಾನ, ಸೂರ್ಯನಿಗೊಂದು ವೀಳ್ಯ (ಕಥಾ ಸಂಕಲನಗಳು), ಗಾಂಧಿ ...

READ MORE

Related Books