‘ಮುಝಫರ್ ಮತ್ತಿತರ ಇಪ್ಪತ್ತು ಕಥೆಗಳು’ ಕೃತಿಯು ‘ಸಮಾಜಮುಖಿ ವಾರ್ಷಿಕ ಕಥಾಸಂಕಲನ 2022’ರ ಪ್ರಶಸ್ತಿ ಪಡೆದ ಕತೆಗಳ ಸಂಕಲನವಾಗಿದೆ. ಈ ಕೃತಿಯನ್ನು ಚಂದ್ರಕಾಂತ ವಡ್ಡು ಅವರು ಸಂಪಾದಿಸಿದ್ದಾರೆ. ಇಲ್ಲಿ ಚಂದ್ರಕಾಂತ ವಡ್ಡು ಅವರ ಸಂಪಾದಕರ ನುಡಿಯಿದೆ. ತೀರ್ಪುಗಾರರ ಟಿಪ್ಪಣಿಯಲ್ಲಿ ಚೈತ್ರಿಕಾ ನಾಯ್ಕ ಹರ್ಗಿ ಹಾಗೂ ಡಾ. ಮುಸ್ತಾಫ ಕೆ.ಎಚ್ ಅವರ ಮಾತುಗಳಿವೆ. ಇಲ್ಲಿ ಪ್ರಶಸ್ತಿ ಪುರಸ್ಕೃತ ಕತೆಗಳಾದ, ದೀಪಾ ಹಿರೇಗುತ್ತಿ ಅವರ ‘ಬಯಕೆ’, ಎಂ. ನಾಗರಾಜ ಶೆಟ್ಟಿ ಅವರ ‘ಮುರುಫರ್’, ಶ್ರೀಹರ್ಷ ಸಾಲಿಮಠ ಅವರ ‘ಹಲ್ಲೀರ ಮತ್ತು ರಂಗನಾಯಕಿ’, ದೀಪ್ತಿ ಭದ್ರಾವತಿ ‘ನಮ್ಮವರು’, ಪ್ರೇಮಲತ ಬಿ. ಅವರ ‘ಗೊಡ್ಡು’ ಹಾಗೂ ತೀರ್ಪುಗಾರರು ಮೆಚ್ಚಿದ ಕತೆಗಳಾದ, ನಂದಿನಿ ಹೆದ್ದುರ್ಗ ಅವರ ‘ಮತ್ತೆ ಬಾ ದೇವರೆ’, ಅನಿಲ್ ಟಿ. ಗುನ್ನಾಪುರ ಅವರ ‘ಗೋಲ್ ಗುಂಬಜ್ ಎಕ್ಸ್ ಪ್ರೆಸ್, ಸಂಜೋತಾ ಪುರೋಹಿತ ‘ಗರಿಕೆಹಲ್ಲು’, ಗೀತಾ ಕುಂದಾಪುರ ಅವರ ‘ಹೆದ್ದಾರಿಯಲ್ಲಿ ನಿಂತ ಬದುಕು’, ಚಂದ್ರಪ್ರಭ ಕಠಾರಿ ಅವರ ‘ಅಂಬೇಡ್ಕರ್ ಕಾಲೊನಿ’, ನಳಿನಿ ಭೀಮಪ್ಪ ಅವರ ‘ಸಾತಜ್ಜಿ ಮತ್ತು ಸ್ಮಾರ್ಟ್ ಫೋನು’, ಆರ್. ಪವನ್ ಕುಮಾರ್ ಅವರ ‘ಪರ್ಲ್’, ಪ್ರಕಾಶ್ ಪೊನ್ನಾಚಿ ಅವರ ‘ಹುಲಿಮಾರಿ’, ಸುಧಾ ಆಡುಕಳ ಅವರ ‘ಒಂದು ಶೌಚಲಯದ ಕಥೆ’, ಅಬ್ದುಲ್ ರಹಿಮಾನ್ ಅವರ ‘ಶರೀಫನ ಪಕೋಡ’, ಶ್ರೀದೇವಿ ಕೆರೆಮನೆ ಅವರ ‘ರೂಪರೂಪಗಳನು ದಾಟಿ’, ಆನಂದ ಕುಂಚನೂರ ಅವರ ‘ಪರೋಕ್ಷ’, ಮಿರ್ಜಾ ಬಷೀರ್ ಅವರ ‘ಹೋಟೆಲ್ ಗಜಾನನ’, ಸುಮಾ ರಮೇಶ್ ಅವರ ‘ಬೂಮ್ ರಾಂಗ್’, ಭಾಗ್ಯಜ್ಯೋತಿ ಹಿರೇಮಠ ಅವರ ‘ಬೆಳಕಿನ ಬಸಿರು’ ಕತೆಗಳು ಇಲ್ಲಿವೆ.
ಚಂದ್ರಕಾಂತ ವಡ್ಡು ಅವರು ಮೂಲತಃ ತೋರಣಗಲ್ಲು ಬಳಿಯ ವಡ್ಡು ಗ್ರಾಮದವರು. ಹಿರಿಯ ಪತ್ರಕರ್ತರು. ಸಮಾಜಮುಖಿ ಎಂಬ ಮ್ಯಾಗ್ಝಿನ್ ಸಂಪಾದಕರು. ಕೃತಿಗಳು: ಅಮ್ಮನ ನೆನಪು- ಭಾಗ-1 ಹಾಗೂ ಅಮ್ಮನ ನೆನಪು-ಭಾಗ-2, ಅಂತಃಕರಣದ ಗಣಿ, ನಾರಿಹಳ್ಳದ ದಂಡೆಯಲ್ಲಿ, ಸೌಹಾರ್ದ ಕರ್ನಾಟಕ, ಮುಝಫರ್ ಮತ್ತಿತರ ಇಪ್ಪತ್ತು ಕಥೆಗಳು, ಸಮಕಾಲೀನ ...
READ MORE