ಸುನಂದಾ ಬೆಳಗಾಂವಕರ ಅವರ ಕಥೆಗಳ ಸಂಗ್ರಹ ‘ಮೃದ್ಗಂಧ’.ಮೋಹನ ನಾಗಮ್ಮನವರ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರ ಮಾತಿನಂತೆ, ’ಯಾತನೆಯೆನ್ನುವುದೆಲ್ಲ ಕೆಲವೇ ವರ್ಗಕ್ಕೆ ಸೀಮಿತ, ಮಿಕ್ಕಂತೆ ಎಲ್ಲವೂ ಸುಭಿಕ್ಷ ಎನ್ನುವ ಸ್ವೇಷಬದ್ಧ ನಿಲುವಿಗೆ ಜೋತುಗಬಿದ್ದ ವರ್ತಮಾನದಲ್ಲಿ, ಶ್ರೇಷ್ಠ ಜಾತಿಯ ಹುಟ್ಟಿನಿಂದ ಮಾತ್ರವೇ ನೋವಿರದ ಸ್ಥಿತಿ ಇರುವುದು ಎಂದು ಭ್ರಮಿಸಿರುವವರನ್ನು ಪ್ರಶ್ನಿಸುವ ಧಾಟಿಯಲ್ಲಿ ಸುನಂದಾ ಅವರ ಕತೆಗಳು ನಮ್ಮನ್ನು ತಟ್ಟುತ್ತವೆ. ಪುರುಷ ಬರಹಗಾರರ ಅರಿವಿಗೆ ನಿಲುಕದ, ಆಧುನಿಕ ನಗರ ಕೇಂದ್ರಿತ ಲೇಖಕಿಯರನ್ನು ತಟ್ಟದ, ಅದರಲ್ಲೂ ಸಾಹಿತ್ಯ ರಂಗದಲ್ಲಿ ಹೆಚ್ಚಾಗಿ ಪ್ರತಿಬಿಂಬಿತವಾಗಿಲ್ಲದ ಉತ್ತರ ಕರ್ನಾಟಕ ಗ್ರಾಮ ಬದುಕಿನ ಮಹಿಳೆಯ ಸಮೃದ್ಧ ಜೀವನಾನುಭವ ಇಲ್ಲಿ ನಮಗೆ ದಕ್ಕುತ್ತದೆ’ ಎಂದಿದ್ದಾರೆ.
ಇಪ್ಪತ್ತನೆ ಶತಮಾನದ ಪೂರ್ವಾರ್ಧದ ಸಮಕಾಲೀನ ಲೇಖಕಿಯರಲ್ಲಿ ಒಂದು ಗಣನೀಯ ಹೆಸರೆಂದರೆ ಸುನಂದಾ ಬೆಳಗಾಂವಕರ. ಧಾರವಾಡದ ಮಹಿಷಿ ಕುಟುಂಬದವರು. ವಿವಾಹದ ನಂತರ ಆಫ್ರಿಕಾ ಖಂಡದ ಝಾಂಬಿಯ ದೇಶದಲ್ಲಿ ತಮ್ಮ ಪತಿಯೊಡನೆ ಮೂವತ್ತು ವರ್ಷ ಕಳೆದು, ಬಳಿಕ ಭಾರತಕ್ಕೆ ಹಿಂತಿರುಗಿದರು. ಸುನಂದಾ ಬೆಳಗಾವಕರರವರು ಬರೆದ ‘ಕಜ್ಜಾಯ(ಪ್ರಬಂಧ)’ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಲ್ಲದೆ ಅವರು ‘ಶಾಲ್ಮಲಿ’ ಎನ್ನುವ ಕಾವ್ಯಸಂಕಲನ, ‘ನಾಸು’, ‘ಝವೇರಿ’ ಎನ್ನುವ ಕಾದಂಬರಿಗಳನ್ನು ಬರೆದಿದ್ದಾರೆ. ಸುನಂದಾ ಬೆಳಗಾಂವಕರ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ‘ನಾಸು’ ಕಾದಂಬರಿಗೆ 1990 ರಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಲಭಿಸಿದೆ. 2017ರಲ್ಲಿ ನಿಧನ ಹೊಂದಿದರು. ...
READ MORE