ಹಳ್ಳಿಯ ಬಡತನ, ಜಾತಿ-ಮತ, ಕೋಮುವಾದ, ಸ್ತ್ರೀ ದೌರ್ಜನ್ಯ ಮುಂತಾದ ವಿಷಯಗಳ ಕುರಿತ ಇಲ್ಲಿನ ಕಥೆಗಳಿವೆ ಈ ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಉತ್ತರ ಕರ್ನಾಟಕದ ಭಾಷೆ ಮತ್ತು ಸತ್ವ ಈ ಕತೆಗಳ ವಿಶೇಷ. ಕೆಂಪುಗುಲಾಬಿ ಕಾದಂಬರಿಯ ಮೂಲಕ ಹೆಸರು ಮಾಡಿರುವ ಹನುಮಂತ ಹಾಲಗೇರಿ ಎರಡನೇ ಕೃತಿಯಿದು. ಭರವಸೆ ಮೂಡಿಸಿರುವ ಕತೆಗಾರರಲ್ಲಿ ಒಬ್ಬರಾಗಿರುವ ಹನುಮಂತ ಈ ಸಂಕಲನದ ಕತೆಗಳು ಸೊಗಸಾಗಿವೆ. ಓದುಗರಿಗೆ ಮುದ ನೀಡುವಂತಿವೆ.
ಬಾಗಲಕೋಟೆ ಸಮೀಪದ ತುಳಸಿಗೇರಿಯವರಾದ ಹನಮಂತ ಹಾಲಿಗೇರಿಯವರು ಬಸವೇಶ್ವರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರೂ ಅದನ್ನು ಅರ್ಧಕ್ಕೆ ಕೈ ಬಿಟ್ಟು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗ್ರಾಮೀಣ ಅಭಿವೃದ್ಧಿ ವಿಭಾಗದಲ್ಲಿ ಪದವಿ ಪಡೆದರು. ಸರ್ವ ಶಿಕ್ಷಣ ಅಭಿಯಾನದ ಟೀಚರ್ ಆಗಿ ಮೂರು ವರ್ಷಗಳ ಕಾಲ ಗ್ರಾಮೀಣ ಗುರುಕುಲ ನಡೆಸಿರುವ ಅವರು, ನಂತರ ‘ಭೈಪ್’ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಅಲ್ಲಿಯೂ ಮೂರು ವರ್ಷ ಕೆಲಸ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿದ್ದರು. ಕೆಂಗುಲಾಬಿ ಕಾದಂಬರಿ ಪ್ರಕಟಿಸುವ ಮುನ್ನ ಅವರು ಎಂಟನೇ ತರಗತಿಯಲ್ಲಿದ್ದಾಗ ‘ರೊಚ್ಚಿಗೆದ್ದ ...
READ MORE