ಮಣ್ಣಿನ ಗೋಡೆಗಳು

Author : ಕೇಶವರೆಡ್ಡಿ ಹಂದ್ರಾಳ

Pages 2008

₹ 275.00




Year of Publication: 649
Published by: ಸಪ್ನ ಬುಕ್‌ ಹೌಸ್
Address: #‌11 3ನೇ ಮುಖ್ಯ ರಸ್ತೆ ಗಾಂಧುನಗರ ಬೆಂಗಳೂರು-560009.

Synopsys

'ಮಣ್ಣಿನ ಗೋಡೆಗಳು' ಕಥಾ ಸಂಕಲನವನ್ನು ಲೇಖಕ ಕೇಶವರೆಡ್ಡಿ ಹಂದ್ರಾಳ ಅವರು ರಚಿಸಿದ್ದಾರೆ. ಒಟ್ಟು ಎಪ್ಪತ್ತು ಕಥೆಗಳನ್ನು ಒಳಗೊಂಡ ಈ ಕೃತಿಯಲ್ಲಿ ಸಮಾಜದ ಆಗು ಹೋಗುಗಳನ್ನೇ ಕಥಾ ವಸ್ತುವನ್ನಾಗಿಸಿ ಹೆಣೆಯಲಾಗಿದೆ. ಸಾವು ಕೆಲವರಿಗೆ ಇಷ್ಟವಾದ ವಸ್ತುವಾದರೆ ಇನ್ನು ಕೆಲವರಿಗೆ ಯೋಚಿಸಲೂ ಅಗದಂತಹ ವಸ್ತು ಎಂದು ಲೇಖಕರು ತಮ್ಮ ಮುನ್ನುಡಿಯಲ್ಲಿ ಹೇಳುತ್ತಾರೆ. ಹಾಗಾಗಿ ಇಲ್ಲಿನ ಕಥೆಗಳು ಒಬ್ಬ ವ್ಯಕ್ತಿಯ ಸಾವಿನ ಸುತ್ತ ನಡೆಯುವ ತನಿಖೆ, ಸಾವಿನ ನಿಖರ ಕಾರಣ, ಸಾವಿನ ಹಿಂದಿನ ರಹಸ್ಯದ ಸುತ್ತ ಕಥೆಯು ಸಾಗುತ್ತದೆ. ಹಾಸ್ಯ ಮಿಶ್ರಿತ ತನಿಖಾ ಕಥೆಗಳೊಂದಿಗೆ ಕೃತಿಯ ಕತೆಯು ಸಾಗುತ್ತದೆ.

About the Author

ಕೇಶವರೆಡ್ಡಿ ಹಂದ್ರಾಳ
(22 July 1957)

ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರೂ ಅನಕ್ಷರಸ್ಥರು . ಕೃಷಿ ಕೆಲಸಗಳನ್ನು ಮಾಡಿಕೊಂಡೇ ಹಂದ್ರಾಳದ ಪ್ರೈಮರಿ ಸ್ಕೂಲು , ಬ್ಯಾಲ್ಯದ ಮಿಡ್ಲಿಸ್ಕೂಲು ಪೂರೈಸಿದ್ದು . ತಾತ ನರಸಿಂಹರೆಡ್ಡಿ ಆಂಧ್ರದ ಅನಂತಪುರ ಜಿಲ್ಲೆಯ ಊರೊಂದರ ಜಮೀನುದಾರ . ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಆ ಸೀಮೆಯ ಶೋಷಕ ಬ್ರಿಟಿಷ್ ಕಲೆಕ್ಟರ್ ನನ್ನು ಖೂನಿ ಮಾಡಿ ರಾತ್ರೋರಾತ್ರಿ ಕರ್ನಾಟಕದ ಕಡೆ ಪ್ರಯಾಣ .  ಕಾಪು ರೆಡ್ಡಿಯಾಗಿದ್ದ ತಾತ ಮದುವೆಯಾಗಿದ್ದು ಕಮ್ಮ ಜಾತಿಯ ಅಜ್ಜಿಯನ್ನು . 1947 ...

READ MORE

Related Books