ಬುದ್ಧನು ಹೇಳಿದನೆನ್ನಲಾದ ಜಾತಕ ಕಥೆಗಳಲ್ಲಿ ಕೆಲವೊಂದನ್ನು ಮಾತ್ರ ಇಲ್ಲಿ ಸಂಕಲಿಸಿದ ಕೃತಿ-ಮಣಿಕಂಠ. ಜನರಿಗೆ ಧರ್ಮದ ಕುರಿತು ಅರಿವು ಮೂಡಿಸಲು ಗೌತಮ ಬುದ್ಧನು ಹೇಳಿದ ಕಥೆಗಳಿವು. ಅವು ಸಂಖ್ಯೆಯಲ್ಲಿ 500 ಇವೆ ಎಂದು ಹೇಳಲಾಗುತ್ತಿದೆ. ಆದರೆ, ಚಿಂತಕ-ಕವಿ ಜೆ.ಪಿ.ರಾಜರತ್ನಂ ಅವರು ಕೇವಲ 31 ಕಥೆಗಳನ್ನು ಸಂಗ್ತಹಿಸಿ ಇಲ್ಲಿ ನೀಡಿದ್ದಾರೆ. ಆ ಪೈಕಿ ಮೊದಲನೇ ಕಥೆಯೇ-ಮಣಿಕಂಠ. ಬುದ್ಧನು ಅನೇಕ ಜನ್ಮಗಳನ್ನು ಪಡೆದಿದ್ದು, ಈ ಕಥೆಗಳು ಬುದ್ಧನ ಪೂರ್ವ ಜನ್ಮದ ಕಥೆಗಳೆಂದೂ, ಇವುಗಳಿಗೆ ಜಾತಕ ಕಥೆಗಳೆಂಲೂ ಕರೆಯುತ್ತಾರೆ. ಕೇವಲ ಮಕ್ಕಳಿಗೆ ಮಾತ್ರವಲ್ಲ; ದೊಡ್ಡವರಿಗೂ ಈ ಕಥೆಗಳಲ್ಲಿ ಜೀವನ ನೀತಿ ಸೂತ್ರಗಳಿವೆ. ಬದುಕು ಸಾರ್ಥಕತೆ ಪಡೆಯುವ ಮಾರ್ಗಗಳಿವೆ ಎಂದು ಅಭಿಪ್ರಾಯಪಡಲಾಗುತ್ತದೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE