ಮಣೆಗಾರ

Author : ತುಂಬಾಡಿ ರಾಮಯ್ಯ

Pages 172

₹ 150.00




Year of Publication: 2014
Published by: ತುಂಬಾಡಿ ಪ್ರಕಾಶನ
Address: ತುಂಬಾಡಿ ತುಮಕೂರು ಜಿಲ್ಲೆ
Phone: 9480286844

Synopsys

‘ಮಣೆಗಾರ’ ಕೃತಿಯು ತುಂಬಾಡಿ ರಾಮಯ್ಯ ಅವರ ಆತ್ಮಕಥನ ಪ್ರಕಾರದ ಪರಿಚಯವಾಗಿದೆ. ಒಂದು ನಿರ್ದಿಷ್ಟ ಸಮುದಾಯದಲ್ಲಿ ಹುಟ್ಟಿದ ಕತೆಗಳಲ್ಲಿ ಆ ವರ್ಗದ ದುಃಖ, ಕನಸುಗಳು ಇರುತ್ತವೆಂಬುದನ್ನು ಇಲ್ಲಿ ಕಾಣಬಹುದು. ಶೂದ್ರರು ಹಾಗೂ ದಲಿತರಲ್ಲಿ ಉಂಟಾದ ವೈಚಾರಿಕ ಪ್ರಜ್ಞೆಯ ಬೆಳವಣಿಗೆಯ ಅಧ್ಯಯನದ ದೃಷ್ಟಿಯಿಂದಲೂ ಈ ಕೃತಿ ಮಹತ್ವದಾಗಿದೆ. ‘ಒಂದೂರಾಗೆ ಗಂಡಹೆಂಡ್ತಿರಿದ್ರು. ಇಬ್ಬರೂ ಹಳೆ ಮಟ್ಟ ರಿಪೇರಿ ಮಾಡ್ಕಂಡು ಹೊಟ್ಟೆ ಹೊರೀತಿದ್ರ. ಇರೋಕ್ಕೊಂದು ಗುಡ್ಲು, ಉಡಾಕ್ಕೂಂದು ದುಪ್ಟಿ. ಆ ದುಪ್ಟೇನ್ನೇ ರಾತ್ರಿ ಹ್ರೆತ್ನಾಗೆ ಇಬ್ರೂ ಸೇರಿ ಹೊದ್ಕೊಂಡು ಮಲಗ್ತಿದ್ರು. ಬೆಳಕಾಗುತ್ತಿದ್ದಂತೆ ಹೆಂಡತಿ ಅದೇ ದುಪ್ಟೀನ ಸೀರೆ ಮಾಡ್ಕಂಡು ಉಟ್ಕಳ್ತಿದ್ಲು’ ಅನ್ನುವುದು ಈ ಆತ್ಮಕಥೆಯಲ್ಲಿ ಬರುವಂತಹ ಒಂದು ಕಥಾನಕದ ರೂಪಕವಾಗಿದೆ.

About the Author

ತುಂಬಾಡಿ ರಾಮಯ್ಯ

ಲೇಖಕ ತುಂಬಾಡಿ ರಾಮಯ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ತುಂಬಾಡಿ ಗ್ರಾಮದವರು. ದಲಿತ ಚಳವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಪ್ರಸ್ತುತ ಕಾರ್ಮಿಕ ಅಧಿಕಾರಿಯಾಗಿದ್ದಾರೆ. ಕೃತಿಗಳು: ಮಣೆಗಾರ, ಓದೋರಂಗ ಪ್ರಶಸ್ತಿ: 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪುರಸ್ಕಾರ ...

READ MORE

Related Books