‘ಮನಸು ಮಾತಾಡಿತು’ ಲೇಖಕ ಎ.ಆರ್. ಮಣಿಕಾಂತ್ ಅವರ ಸಣ್ಣ ಕಥೆ ಮತ್ತು ಲೇಖನಗಳ ಸಂಕಲನ. ಬದುಕಿನತ್ತ ತುಡಿಯುವುವಂತೆ ಮಾಡುವ ಹಲವು ಸಣ್ಣ ಕತೆಗಳಿವೆ, ಜೊತೆಗೆ ಸಾಕ್ಷ್ಯಚಿತ್ರಗಳಂತಹ ಹಲವು ಲೇಖನಗಳಿವೆ. ಇಲ್ಲಿನ ಬರಹಗಳೆಲ್ಲ ವ್ಯಕ್ತಿಕೇಂದ್ರಿತವಾದವು. ತಿರುಕನೊಬ್ಬನ ಕನಸು ನಿಜವಾಗುವ ವಿಸ್ಮಯದಂತೆ ಕಾಣುವಂತವು, ಸಾಮಾನ್ಯರ ಬದುಕಿನಿಂದಲೇ ಕತೆಗಳನ್ನೆತ್ತಿ ಅಸಾಮಾನ್ಯ ಬದುಕನ್ನು ಕಟ್ಟಿಕೊಳ್ಳುವ ಬಗೆಯನ್ನು ಮಣಿಕಾಂತ್ ತಮ್ಮ ಕತೆಗಳಲ್ಲಿ ನಿರೂಪಿಸಿದ್ದಾರೆ. ಚಿಕ್ಕ ಚಿಕ್ಕ ವಿಚಾರಗಳಿಗೆ ಬದುಕನ್ನು ಕೊನೆಗೊಳಿಸಿಕೊಳ್ಳುವ ಯುವಜನಾಂಗದ ಜನರಿಗೆ ಈ ಕೃತಿ ಹೆಚ್ಚು ಉಪಯುಕ್ತ.
ಪತ್ರಕರ್ತ, ಬರಹಗಾರರಾಗಿರುವ ಮಣಿಕಾಂತ್ ಅವರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯತನಹಳ್ಳಿಯವರು. ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ ಎಂಬ ಅಂಕಣಗಳನ್ನು ಬರೆದಿದ್ದಾರೆ. ಇವರ ಬರೆದಿರುವ ಕೃತಿಗಳೆಂದರೆ ಅಮ್ಮ ಹೇಳಿದ ಎಂಟು ಸುಳ್ಳುಗಳು, ಹಾಡು ಹುಟ್ಟಿದ ಸಮಯ, ಅಪ್ಪ ಅಂದ್ರೆ ಆಕಾಶ, ಭಾವ ತೀರ ಯಾನ, ಮನಸು ಮಾತಾಡಿತು ಮುಂತಾದವು. ಇವರ ಅಮ್ಮ ಹೇಳಿದ ...
READ MORE