ಪ್ರಸನ್ನ ವಿ ಚೆಕ್ಕೆಮನೆ ಅವರ ‘ಮನದ ಮಲ್ಲಿಗೆ’ ವಿಭಿನ್ನ ಕೌಂಟುಂಬಿಕ ವಾತಾವರಣದ ಚೌಕಟ್ಟನ್ನು ಹೊಂದಿರುವ 18 ಕಥೆಗಳುಳ್ಳ ಕಥಾಸಂಕಲನವಾಗಿದೆ. ಈ ಸಂಕಲನಕ್ಕೆ ಲೇಖಕ, ಪತ್ರಕರ್ತ ಉಮೇಶ್ ಶಿಮ್ಲಡ್ಕ ಮುನ್ನುಡಿ ಬರೆದಿದ್ದಾರೆ. ಕಥೆಗಳ ನಡುವೆಯೇ ಪುಟ್ಟ ಪುಟ್ಟ ಕವನಗಳ ಬಳಕೆಯನ್ನು ಮಾಡುವ ಮೂಲಕ ಕಥಾ ನಿರೂಪಣೆಯನ್ನು ಹೆಚ್ಚಿಸಿದ್ದಾರೆ.
ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳದಲ್ಲಿರುವ ಸರ್ಪಂಗಳ ಹರಿಯಪ್ಪ ಭಟ್ ಹಾಗೂ ರಮಾ ಎಚ್. ಭಟ್ ದಂಪತಿಯ ಪುತ್ರಿ ಪ್ರಸನ್ನಾ ವಿ ಚೆಕ್ಕೆಮನೆ 05-01-1979ರಂದು ಜನಿಸಿದರು. ಅವರು ಚೆಕ್ಕೆಮನೆ ವೆಂಕಟಕೃಷ್ಣ ಅವರ ಪತ್ನಿ. ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿರುವ ಇವರ ಒಂದು ಹವ್ಯಕ ಕಾದಂಬರಿ ಸ್ವಯಂವರವು ಒಪ್ಪಣ್ಣ. ಕಾಂ ಎಂಬ ವೆಬ್ ಸೈಟ್ ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ...
READ MORE