ಸಂಗಾತ ಸಾಹಿತ್ಯ ಪತ್ರಿಕೆಯ ಸಂಪಾದಕರೂ ಹಾಗೂ ಲೇಖಕರಾದ ಟಿ. ಎಸ್. ಗೊರವರ ಅವರ ’ಮಲ್ಲಿಗೆ ಹೂವಿನ ಸಖ’ ಕಥಾ ಸಂಕಲನವಾಗಿದೆ.
ಕಥಾ ನಾಯಕ ಯಮನೂರಪ್ಪ ಹಾಗೂ ಅವನು ಮಗುವಿದ್ದಾಗಿನಿಂದ ಹಿಡಿದು ಮದುವೆಯಾಗುವ ಸಮಯದವರೆಗೂ ಅವನಿಗೆ ಗಂಟುಬಿದ್ದ ಮಲ್ಲಿಗೆ ಹೂವಿನ ಸಖ್ಯ, ವಿಜ್ಞಾನ ಮತ್ತು ಕಲೆಯ ಸಂವಹನದಲ್ಲಿ ಶಿಲ್ಪಗೊಂಡು ಹೊರಬಂದ ಕತೆಯನ್ನು ಚಿತ್ರಿಸುತ್ತದೆ. ಮಲ್ಲಿಗೆ ಹೂವಿನ ಸಖ್ಯ ಅವನನ್ನು ದುರಂತಕ್ಕೀಡು ಮಾಡುವ ಹಲವಾರು ಸನ್ನಿವೇಶಗಳು ರೋಚಕವಾಗಿ ಈ ಕೃತಿಯಲ್ಲಿ ಚಿತ್ರಿತವಾಗಿದೆ. ನಿತ್ಯ ಬದುಕಿನ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗದೇ ಇರುವ ಅನಿವಾರ್ಯ ಕ್ಷಣಗಳ ಹುಡುಕಾಟ ಇಲ್ಲಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದ ಟಿ.ಎಸ್. ಗೊರವರ, 1984 ಜೂನ್ 10 ರಂದು ಜನಿಸಿದರು. ರಾಜೂರು, ಗಜೇಂದ್ರಗಡದಲ್ಲಿ ವಿದ್ಯಾಭ್ಯಾಸ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಪ್ರಕಟಿತ ಕೃತಿಗಳು. ತನ್ನ ಎದೆಯ ಮೆದುವನ್ನೇ ನಾದಿ ನಾದಿ ಮಿದ್ದು ಒಂದು ಹದದಲ್ಲಿ ಕೆತ್ತಿದಂತಿರುವ ಇವರ ...
READ MORE