ಮ್ಯಾಜಿಕ್ ಸೌಟು

Author : ಪೂರ್ಣಿಮಾ ಮಾಳಗಿಮನಿ

Pages 136

₹ 153.00




Year of Publication: 2024
Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ಸಾವಣ್ಣ ಎಂಟರ್‌ಪ್ರೈಸಸ್‌, ನಂ. 12, ಭೈರಸಂದ್ರ ಮುಖ್ಯರಸ್ತೆ, ಜಯನಗರ 1ನೇ ಬ್ಲಾಕ್‌ ಪೂರ್ವ, ಬೆಂಗಳೂರು-560011
Phone: 080-41229757/ 9036312786

Synopsys

‘ಮ್ಯಾಜಿಕ್ ಸೌಟು’ ಪೂರ್ಣಿಮ ಮಾಳಗಿಮಾನಿ ಅವರ ಸಣ್ಣ ಕಥಾ ಸಂಗ್ರಹವಾಗಿದೆ. ಈ ಕೃತಿಗೆ ಲೇಖಕ ಜೋಗಿ ಅವರು ಬರೆದ ಬೆನ್ನುಡಿ ಹೀಗಿದೆ; ನಮ್ಮ ಭಾವ ಪ್ರಪಂಚಕ್ಕೆ ಸೇರಿದ ಎಲ್ಲ ಸಂಗತಿಗಳೂ ರಿಲೆಟಿವ್‌. ಒಂದಕ್ಕೊಂದು ಹೆಣೆದುಕೊಂಡೇ ಬದುಕಿನ ಒಪ್ಪಂದವೊಂದು ತಯಾರಾಗುತ್ತದೆ. ಪೂರ್ಣಿಮಾರ ಕತೆಗಳಲ್ಲಿ ಈ ಬಗೆಯ ಅಪರೂಪವಾದುದೊಂದು ನೇಯ್ಗೆಯಿದೆ. ಒಂದು ಸೌಟು ಎಷ್ಟೆಲ್ಲ ರೂಪಕಗಳಿಗೆ ಕನ್ನಡಿಯಾಗಿ ಅಚ್ಚರಿಗೊಳಿಸುತ್ತದೆ. ಕಡೆಗೂ ಹೆಣ್ಣೊಬ್ಬಳ ಸಿದ್ಧಿಯಿರುವುದು ಅಡುಗೆ ಮನೆಯಲ್ಲಿಯೇ ಎಂಬ ಏಕರೂಪ ನೀತಿಯನ್ನು ಈ ಕತೆ ವಾಚ್ಯವಲ್ಲದ ರೀತಿಯಲ್ಲಿ ಸ್ಪಷ್ಟವಾಗಿ ಪ್ರಶ್ನಿಸುತ್ತದೆ. -ಕಾವ್ಯ ಕಡಮೆ ಕತೆ ರಚಿಸಲಿಕ್ಕೆ ಅಂತ ಪಟ್ಟಾಗಿ ಕುಳಿತು ಬರೆಯುವವರು ಅಪರೂಪ. ಅದರಲ್ಲಿಯೂ ಹೊಸ ತಲೆಮಾರಿನವರು ಇಲ್ಲವೇ ಇಲ್ಲ. ಆದರೆ ಈ ಮಾತಿಗೆ ಅಪವಾದ ಎನ್ನುವಂತೆ ಪೂರ್ಣಿಮಾ, ಹೊಸ ಹೊಸ ಕಥಾವಸ್ತುಗಳೊಂದಿಗೆ ಓದುಗರಿಗೆ ಮುಖಾಮುಖಿಯಾಗುತ್ತಾರೆ. ಇಲ್ಲಿನ ಮ್ಯಾಜಿಕ್‌ ಸೌಟು, ಕೇಳದೆ ನಿಮಗೀಗ, ಅದಲು-ಬದಲು 'ಇತರ ಕತೆಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಬಹುಶಃ ಕತೆಗಳನ್ನು ಉಸಿರಾಡುವುದೆಂದರೆ ಇದೇ ಇರಬೇಕು. -ಡಾ. ಅಜಿತ್‌ ಹರೀಶಿ ಭ್ರಮೆ ಮತ್ತು ವಾಸ್ತವವನ್ನು ಬಹಳ ಸೊಗಸಾಗಿ ನಿರ್ವಹಿಸಿದ್ದಾರೆ ಪೂರ್ಣಿಮಾ. ಮನುಷ್ಯ ಕಡೆಗೂ ತೀವ್ರವಾಗಿ, ಅಸಂಖ್ಯ ಪದರಗಳಿರುವ ವ್ಯಕ್ತಿತ್ವವಾಗಿ, ಸಾಕಷ್ಟು ಕೊರತೆಗಳಿರುವವನಾಗಿ, ಅಂಥ ಕೊರತೆಗಳನ್ನೂ ಮೀರಿ ಮ್ಯಾಜಿಕ್‌ ಸೃಷ್ಟಿಸುವವನಾಗುತ್ತಾನೆ. ವರ್ಗಗಳ ನಡುವಿನ ಸಣ್ಣ ಸಣ್ಣ ಅಂತರಗಳು, ನಂಬಿಕೆಯ ಸ್ತರಗಳು, ಭರವಸೆ, ಹುಸಿಕೊಸರು-ಎಲ್ಲವೂ ಇಲ್ಲಿ ಹದವಾಗಿ ಬೆಸೆದಿದೆ. ಕಲೆ ಮತ್ತೇನು, ವೆಥೆಗಳ ಕಳೆಯುವ ಭ್ರಮೆ. ಅದಕ್ಕೆ ಜೋತುಬಿದ್ದು ಬದುಕಿನ ಕಷ್ಟಗಳನ್ನು ದಾಟುತ್ತೇವೆ. -ವಿಕಾಸ್‌ ನೇಗಿಲೋಣಿ ಆಧುನಿಕ ನೋಟ, ಆರ್ದ್ರ ಅಂತರಂಗದ ಚಿಲುಮೆ ಪೂರ್ಣಿಮಾ ಕತೆಗಳ ಶಕ್ತಿ. ಅವರು ಕತೆಗಳನ್ನು ಭಾವಿಸಿ ಬರೆಯುತ್ತಾರೆಂದು ನನ್ನ ನಂಬಿಕೆ. ಕತೆಯೊಳಗೆ ನಮ್ಮ ವ್ಯಕ್ತಿತ್ವದ ತುಣುಕೊಂದು ಸೇರಿಕೊಂಡಾಗ ಅದರ ಚಹರೆಯೇ ಬದಲಾಗುತ್ತದೆ. ಇಲ್ಲಿನ ಅನೇಕ ಕತೆಗಳಲ್ಲಿ ಅದಾಗಿದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಪೂರ್ಣಿಮಾ ಮಾಳಗಿಮನಿ

ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹನುಮಂತಪುರದವರು. ಮಂಡ್ಯ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿ, ಚಿತ್ರದುರ್ಗದ ಎಸ್.ಜೆ.ಎಂ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಪದವೀಧರೆ.  'ಎನಿ ವನ್ ಬಟ್ ದಿ ಸ್ಪೌಸ್' ಎನ್ನುವ ಇಂಗ್ಲೀಷ್ ಕಿರುಗತೆಗಳ (2017) ಸಂಕಲನ ಪ್ರಕಟಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಹಲವಾರು ತಾಂತ್ರಿಕ ಹಾಗೂ ಸಾಹಿತ್ಯಕ  ವಿಷಯ ಕುರಿತ ಲೇಖನಗಳು ಪ್ರಕಟವಾಗಿವೆ. ಪ್ರತಿಷ್ಠಿತ ಭಾರತೀಯ ವಾಯುಸೇನೆಯಲ್ಲಿ ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಧಿಕಾರಿಯಾಗಿ ಆರು ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಜಂಟಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.   ಕೃತಿಗಳು: Anyone but the ...

READ MORE

Related Books