ಖ್ಯಾತ ಲೇಖಕ ಡಾ. ಆನಂದ ಋಗ್ವೇದಿ ಅವರ ಕಥಾ ಸಂಕಲನ-ಮಗದೊಮ್ಮೆ ನಕ್ಕ ಬುದ್ಧ. ಇಲ್ಲಿ 11 ಕಥೆಗಳಿವೆ. ಸಾಹಿತಿ ಹಾಗೂ ಕವಯತ್ರಿ ಸುನಂದಾ ಪ್ರಕಾಶ ಕಡಮೆ ಕೃತಿಗೆ ಬೆನ್ನುಡಿ ಬರೆದು ‘ಆತ್ಮವಿಕಾಸ ಹಾಘೂ ಸಾಮಾಜಿಕ ವಿಕಾಸದ ಕಥೆಗಳಿವೆ. ಬೆರಗು ಎನ್ನಿಸುವಷ್ಟು ವಿಭಿನ್ನವೂ ಸಂಕೀರ್ಣವೂ ಆಗಿವೆ. ತತ್ವ ಸಿದ್ಧಾಂತಗಳನ್ನು ಮೆಟ್ಟಿ ನಿಂತ ಬದುಕಿನ ಹೋರಾಟವಿದೆ. ಪ್ರಭುತ್ವದ ಉದ್ಧೇಶಪೂರ್ವಕ ಹುನ್ನಾರದಲ್ಲಿ ಬಸವಳಿದ ಮನಸ್ಸುಗಳಿವೆ. ಮುಗ್ಧ ಶ್ರಮಿಕರ ನಿತ್ಯದ ಗಂಜಿಯನ್ನು ಕದ್ದ ಜಾಗತಿಕ ಮಾರುಕಟ್ಟೆಯ ಅಟ್ಟಹಾಸವಿದೆ. ರಾಜಕೀಯ ದಲ್ಲಾಳಿಗಳ ದುರಾಸೆ ಇದೆ. ಜನರೇ ಸ್ವತಃ ಕಟ್ಟಿಕೊಂಡ ಅತಿ ಸೂಕ್ಷ್ಮ ಹಿಂಸೆಗಳಿವೆ. ಮನುಷ್ಯತ್ವಕ್ಕೆ ದಿನಗೂಲಿ ನೀಡುವ ಹಂತ ತಲುಪಿದ ಈ ವ್ಯವಸ್ಥೆಯ ಹಿನ್ನೆಲೆಯಲ್ಲಿ ಇಲ್ಲಿಯ ಕಥಾನಕಗಳು ಮಹತ್ವದ್ದು ಅನ್ನಿಸಿಕೊಳ್ಳುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ- ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ. ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...
READ MORE