‘ಮಾದನ ಕರೆಂಟ್ ಕತಂತ್ರ’ ಲೇಖಕ ಪ್ರೊ ಎಚ್.ಟಿ. ಪೋತೆ ಅವರ ಕಥಾ ಸಂಕಲನ. ವರ್ತಮಾನದ ತಲ್ಲಣಗಳನ್ನು ಎದುರುಗೊಳ್ಳುವ ಇಲ್ಲಿಯ ಕತೆಗಳು ದೇಶದ ಸ್ಥಿತಿಯ ಕುರಿತು ವಿವರಣೆ ನೀಡುತ್ತವೆ. ಕೃತಿಯ ಕುರಿತು ಬರೆಯುತ್ತಾ ‘ಇತ್ತೀಚಿಗೆ ನಡೆದ ಸಾರ್ವತ್ರಿಕ ಚುನಾವಣೆಯಂತೂ ತುಂಬಾ ಹೇಸಿಗೆ ಹುಟ್ಟಿಸುತ್ತಿದೆ. ಪ್ರಜ್ಞಾವಂತರಾದವರು ಇದನ್ನು ಬೆಂಬಲಿಸಬಾರದು. ಹಿಂದುತ್ವ, ಜಾತಿ ಸಮೀಕರಣ, ರಾಷ್ಟ್ರೀಯತೆ ಪರಿಕಲ್ಪನೆಯ ತಿರುಚುವಿಕೆ... ಇವೆಲ್ಲ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾದವುಗಳೇ. ವರ್ತಮಾನದ ಈ ಬಗೆಯ ಎಲ್ಲ ತವಕ-ತಲ್ಲಣಗಳೇ ನನ್ನನ್ನು ಬಹುವಾಗಿ ಕಾಡುತ್ತಿವೆ’ ಎನ್ನುತ್ತಾರೆ ಲೇಖಕ ಪೋತೆ.
‘ಪ್ರಗತಿಪರ ಆಲೋಚನೆಗಳೊಟ್ಟಿಗೆ ಬದುಕುತ್ತಿರುವ ನನ್ನಂತಹವರ ಆಂತರ್ಯದಲ್ಲಿ ಅನೇಕ ಸಂಘರ್ಷಗಳನ್ನುಂಟು ಮಾಡುತ್ತಿವೆ. ಆ ಸಂಘರ್ಷಗಳೇ ಸಂವೇದನೆಗಳಾಗಿ ಇಲ್ಲಿ ಸೃಜನಶೀಲ ರೂಪ ಪಡೆದಿವೆ’ ಎನ್ನುತ್ತಾರೆ. ಇಲ್ಲಿನ ಕತೆಗಳಲ್ಲಿ ಒಂದೆಡೆ ಜೀವಪರ- ಪ್ರಗತಿಪರ ಆಲೋಚನೆಗಳು, ಮತ್ತೊಂದೆಡೆ ವರ್ತಮಾನದ ಸಂದರ್ಭದಲ್ಲಿಯ ಸಾಂಸ್ಕೃತಿಕ ತಲ್ಲಣಗಳು ಹುಟ್ಟುಹಾಕುತ್ತಿರುವ ಬದುಕಿನ ಅಪಾಯಗಳು ಸ್ಥಾಯಿಯಾಗಿದೆ. ನನ್ನದು ಲಿಪಿ ಕೆಲಸವಷ್ಟೆ, ನಾಯಿ ನೆರಳು, ಧರೆಗೆ ದೊಡ್ಡವರು, ಗಾಂಧಿ ಕ್ಲಾಸ್, ಇದು ಬರಿ ಬಹಿಷ್ಕೃತ ಅಲ್ಲೋ ಅಣ್ಣಾ, ಮಾದನ ಕರೆಂಟ್ ಕತಂತ್ರ, ಮೆಲುಕು, ಪ್ರಾತಃಸ್ಮರಾಮಿ, ನಾನಾರೆಂಬುದು ನಾನಲ್ಲ ಎಂಬ ಎಂಟು ಕಥೆಗಳು ಸಂಕಲನಗೊಂಡಿವೆ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE