ಲೇಖಕ ಲಿಂಗರಾಜ ಸೊಟ್ಟಪ್ಪನವರ ಅವರು ಕತೆಗಳ ಸಂಕಲನ ‘ಮಾರ್ಗಿ’. ಡಿ.ಎಸ್. ಚೌಗಲೆ ಅವರು ಕೃತಿಯಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳುವಂತೆ, ಲಿಂಗರಾಜರ ಅನುಭವ ವಿಶ್ವ ಮತ್ತು ವಿಸ್ತಾರ ವ್ಯಕ್ತಿಗತದ ಜೊತೆಗೆ ಸಾಮುದಾಯಿ ಕತ್ವದ ಕಡೆಗೂ ಹರವಿಕೊಳ್ಳುತ್ತದೆ. ಸಮಾಜ, ಧರ್ಮ, ರಾಜಕಾರಣಗಳ ಅವ್ಯಕ್ತ ಪ್ರಭಾವಗಳಲ್ಲಿ ಬಿಚ್ಚುವ ಮನುಷ್ಯ ಬದುಕನ್ನು ಅಸಂಗತ, ಅಮೂರ್ತ ಹಾಗೂ ಮೂರ್ತ ರೂಪಗಳಲ್ಲಿ ತೆರೆದಿಡುತ್ತಾರೆ. ಹಸಿವು, ಕಾಮ, ದ್ವೇಷ, ಪ್ರೀತಿ, ಸ್ನೇಹಾದಿಗಳ ಸಂವೇದನೆಗಳು ಈ ಮೇಲಿನ ವ್ಯವಸ್ಥೆ ಕಾಣದ ಕೈಯಾಗಿ ನಿಯಂತ್ರಿಸುತ್ತಿರುತ್ತವೆ. ಅವುಗಳನ್ನು ಕತೆಯಾಗಿಸುವಲ್ಲಿರುವ ಜೀವನ ದೃಷ್ಟಿಕೋನವೂ ಸ್ಪಷ್ಟಗೊಳ್ಳುತ್ತದೆ. ಇಲ್ಲಿನ ಕತೆಗಳಲ್ಲಿ ಹಲವು ಕತೆಯ ಉತ್ತಮ ಗುಣಗಳನ್ನು ಹೊಂದಿವೆ. ವಸುಧೇಂದ್ರ, ಹನುಮಂತ ಹಾಲಿಗೇರಿ ಅವರು ಹಾಗೂ ವಿದ್ಯಾರಶ್ಮಿ ಪೆಲತ್ತಡ್ಕ ಅವರು ಕೃತಿಯ ಬೆನ್ನುಡಿಯಲ್ಲಿ ಮಾತುಗಳನ್ನು ಹಂಚಿಕೊಂಡಿದ್ದಾರೆ.
ವಿದ್ಯಾರಶ್ಮಿ ಪೆಲತ್ತಡ್ಕ ಅವರು ಹೇಳುವಂತೆ, ಕಥೆಗಾರನಾಗಿ ಅವರು ಕಥೆಯಿಂದ ಕಥೆಗೆ ಬೆಳೆಯುತ್ತ ಬಂದ ಬಗೆಯೂ ಗಮನಾರ್ಹವೇ. ಲಿಂಗರಾಜರ ಕಥೆಗಳಲ್ಲಿ ಗಮನಾರ್ಹವೆನಿಸಿದ್ದು ವಸ್ತು ಮತ್ತು ನಿರೂಪಣೆ, ಸಂಬಂಧಗಳ ಒಡವನ್ನು ಅವರು ಒಡೆಯುವ ರೀತಿಯೇ ಅನನ್ಯ. ವ್ಯಕ್ತಿ-ವ್ಯಕ್ತಿಗಳ ನಡುವಣ ವ್ಯಾಖ್ಯೆ ಅಥವಾ ಬಂಧಗಳ ರೀತಿನೀತಿಗಳನ್ನೆಲ್ಲ ಕಥೆಯಾಗಿ ನಿಭಾಯಿಸುವಲ್ಲಿ ಅವರಿಗೆ ವಿಶೇಷ ಪ್ರಾವೀಣ್ಯ. ವಿವಾಹೇತರ ಸಂಬಂಧಗಳ ಬಗ್ಗೆಯೇ ಬರೆಯುತ್ತಿದ್ದಾರೇನೋ ಅನ್ನುವಷ್ಟರಲ್ಲಿ ಸ್ವಾತಂತ್ರ್ಯ ಸಂಗ್ರಾಮದಂತಹ ದೊಡ್ಡ ವಸ್ತುವನ್ನು ಕೈಗೆತ್ತಿಕೊಳ್ಳುತ್ತಾರೆ. ಸಾಂದ್ರವಾಗಿ ಕಟ್ಟಿಕೊಡುತ್ತಾರೆ. ಪರಿಸರದ ಗಾಢ ಚಿತ್ರಣ, ಭಾಷೆಯ ಬಳಕ ಅವರ ಬಲ ಎಂದಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹಿರೇಮರಳಿಹಳ್ಳಿ ಗ್ರಾಮದವರಾದ ಲಿಂಗರಾಜ ಸೊಟ್ಟಪ್ಪನವರ ಅವರು ಫೆಬ್ರವರಿ 7, 1977ರಲ್ಲಿ ಜನಿಸಿದರು. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಅನೇಕ ಕತೆಗಳು, ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಾವಿಗೆ ಐಡೆಂಟಿಟಿ ಇಲ್ಲ ಕವಿತೆಗಳ ಹಸ್ತಪ್ರತಿಗೆ ಕಣವಿ ಕಾವ್ಯ ಪುರಸ್ಕಾರ , ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಡಾ. ನಿರ್ಮಲ್ ವರ್ಮಾ ಅವರ ಹರ್ ಬಾರೀಶ್ ಮೇ’ ಕೃತಿಯ ಕನ್ನಡ ಅನುವಾದಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಫೆಲೋಶಿಪ್ ದೊರೆತಿವೆ. ಕೃತಿಗಳು: ಮಾರ್ಗಿ (ಕಥಾ ಸಂಕಲನ) ...
READ MORE