ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್

Author : ಅಬ್ದುಲ್ ರಶೀದ್

Pages 84

₹ 135.00




Year of Publication: 2021
Published by: ಬಹುವಚನ ಪ್ರಕಾಶನ
Address: #61, ಸುಕೃತ, ದೆಸಾಯಿ ಗಾರ್ಡನ್ಸ್, ವಸಂತಪುರ ಮೈನ್ ರೋಡ್, ಬೆಂಗಳೂರು 560062
Phone: 6362588659

Synopsys

‘ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್’ ಕೃತಿಯು ಅಬ್ದುಲ್ ರಶೀದ್ ಅವರ ಕತೆಗಳಾಗಿವೆ. ಇಲ್ಲಿನ ಕತೆಗಳು ಸಣ್ಣ ವಿವರಗಳನ್ನು ಕೂಡ ಆಗಾಧ ಭಾವಕೋಶಗಳ ಬ್ರಹ್ಮಾಂಡ ಎಂಬುದನ್ನು ಮನನ ಮಾಡಿಸುವ ಕತೆಗಳಾಗಿವೆ. ಕೃತಿಗೆ ಮುನ್ನುಡಿ ಬರೆದಿರುವ ವಿವೇಕ ಶಾನಭಾಗ ಅವರು, `ನಮ್ಮ ಗ್ರಹಿಕೆಗಳಿಗೆ, ಪೂರ್ವಗ್ರಹಗಳಿಗೆ ಸವಾಲು ಒಡ್ಡುತ್ತ ವಿಭಿನ್ನ ಲೋಕದೊಳಗೆ ಕರೆದೊಯ್ಯುವ ರಶೀದರ ಕತೆಗಳನ್ನು ಓದಿದಾಗ ದೊರಕುವ ಆನಂದ, ಕಳವಳ, ಉದ್ವೇಗ, ಚಿಂತನೆಗಳನ್ನು ಸುಮ್ಮನೇ ಪಡೆಯಬೇಕಲ್ಲದೇ, ಯಾವ ಸಾಹಿತ್ಯಿಕ ಹತಾರಗಳಿಂದಲೂ ದಕ್ಕಿಸಿಕೊಳ್ಳಲಾಗದು' ಎಂದಿದ್ದಾರೆ.

ಕೃತಿಗೆ ಬೆನ್ನುಡಿ ಬರೆದ ಲೇಖಕಿ ಗೀತಾ ವಸಂತ ‘ಕಾಲದ ಪ್ರೇಮಗಳನ್ನು ಕಳಚಿಟ್ಟು ಅಲೆಮಾರಿಯಂತೆ ಚಲಿಸುತ್ತಿರುವುದು ಎಷ್ಟು ಸರಳವೆನಿಸುತ್ತದೆಯೋ ಅದು ಅಷ್ಟೇ ಗಹನವಾದ ಸಂಗತಿಯೂ ಆಗಿಬಿಡುತ್ತದೆ. ಏಕೆಂದರೆ ನಿಶ್ಚಿತ ನೋಟಕ್ರಮಗಳು ಅಭ್ಯಾಸವಾದ ನಮಗೆ ಅದನ್ನು ಮೀರಿ ಸದಾ ಧುಮ್ಮಿಕ್ಕಿ ಹರಿಯುವ ಚೈತನ್ಯವನ್ನು ಅರಿಯುವುದು ಸವಾಲು. ಅದರ ಸಂಗಡ ಸುಮ್ಮನೇ ಹರಿಯುತ್ತಾ ಹೋಗುವುದು ಚಂದ. ಹೊಸನೋಟಗಳು ಮಾತ್ರ ನಮ್ಮನ್ನು ರೋಮಾಂಚನಗೊಳಿಸುತ್ತದೆ. ಕಥನಕ್ಕೆ ಅಂಥ ಬೆರಗಿನ ಕಂಪನ ಬೇಕು. ಈ ಗುಟ್ಟನ್ನು ರಶೀದರ ಕತೆಗಳು ಹೊಟ್ಟೆಯೊಳಗಿಟ್ಟುಕೊಂಡಿವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಅಬ್ದುಲ್ ರಶೀದ್
(28 February 1965)

'ಕೆಂಡಸಂಪಿಗೆ' ಎಂಬ ಅಂತರ್ಜಾಲ  ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು. ಕೊಡಗು ಜಿಲ್ಲೆಯ ಸುಂಟಿಕೊಪ್ಪದ  ರಶೀದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' ಎಂಬ ಕಥಾಸಂಕಲನ ಪ್ರಕಟಿಸಿರುವ ಅಬ್ದುಲ್ ರಶೀದ್ ಕವಿ, ಅಂಕಣಕಾರರು ಕೂಡ. ಅಬ್ದುಲ್ ರಶೀದ್ ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. ನನ್ನ ಪಾಡಿಗೆ ನಾನು’ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಇದುವರೆಗಿನ ಎಲ್ಲ ಕವಿತೆಗಳನ್ನು ಒಳಗೊಂಡ ಸಂಕಲನ. ’ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ...

READ MORE

Related Books