ಕುರುಡು ಕಾಂಚಾಣ

Author : ಅಶೋಕ ಹೆಗಡೆ

Pages 176

₹ 115.00




Year of Publication: 2010
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಪ್ರಜಾವಾಣಿಯ ಕಾಲಂಗಳಲ್ಲಿ, ನಾನು ತಪ್ಪದಂತೆ ಓದುವ ಕೆಲವು ಕಾಲಂಗಳಿವೆ- ಅವುಗಳಲ್ಲಿ ಮುಖ್ಯವಾದದ್ದು, ಅಶೋಕ ಹೆಗಡೆ ಬರೆಯುವ ಕುರುಡು ಕಾಂಚಾಣ. ಅರ್ಥಶಾಸ್ತ್ರ ತನ್ನ ನಿಜದ ಅರ್ಥದಲ್ಲಿ ಮಾರ್ಕೆಟ್‌ಕೇಂದ್ರಿತ ಶಾಸ್ತ್ರವಾಗದೆ ಮಾನವ ಹಿತದ ವಿಶ್ಲೇಷಣೆಯ ಶಾಸ್ತ್ರವಾಗುವುದು ಅಶೋಕರ ಬರವಣಿಗೆಯಲ್ಲಿ. ಶಾಸ್ತ್ರದ ಖಾಚಿತ್ಯದ ಗುಣಗಳನ್ನು ಬಿಟ್ಟುಕೊಡದಂತೆ, ಆದರೆ ಸಾಮಾನ್ಯ ಓದುಗರ ಗ್ರಹಿಕೆಗೆ ಕಷ್ಟವಾದ ಶಾಸ್ತ್ರದ ಟೆಕ್ನಿಕಲ್ ಭಾಷೆಗೆ ಬಂದಿಯಾಗದಂತೆ ಬರೆಯುವ ಅಶೋಕ ಹೆಗಡೆಯವರು, ನಮ್ಮ ಕಾಲದ ಅಪೂರ್ವ ಧೀಮಂತರಲ್ಲಿ ಒಬ್ಬರು. ವೈಯಕ್ತಿಕವಾಗಿ ಹೇಳುವುದಾದರೆ, ಸಮಾಜವಾದಿಯಾಗಿ ಬೆಳೆದು ಬಂದಿರುವ ನಾನು ಭಾವುಕವಾಗಿ ಪರಿಭಾವಿಸುವುದದಬ್ಬು ಈ ಕಾಲದ ವಿದ್ಯಮಾನಗಳ ಹಿನ್ನೆಲೆಯಲ್ಲಿ ವೈಚಾರಿಕವಾಗಿಯೂ ಗ್ರಹಿಸುವಂತೆ ನನಗೆ ಕಲಿಸುತ್ತ ಇರುವ ಕನ್ನಡ ಬರಹಗಾರರಲ್ಲಿ ಅಶೋಕ ಮುಖ್ಯರು. -ಯು. ಆರ್. ಅನಂತಮೂರ್ತಿ

About the Author

ಅಶೋಕ ಹೆಗಡೆ
(22 July 1967)

ಕವಿ ಕಾದಂಬರಿಕಾರ ಅಶೋಕ ಹೆಗಡೆ  22 ಜುಲೈ 1967 ರಂದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಗುಂಜಗೋಡ ಎಂಬಲ್ಲಿ ಜನಿಸಿದರು. ಬದುಕಿನ ಬೆರಗುಗಳನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ಅದನ್ನು ಕವಿತೆ, ಕಥೆ, ಕಾದಂಬರಿಗಳ ಮೂಲಕ ಮರುಶೋಧಿಸುವ ಕಥೆಗಾರ ಅಶೋಕ ಹೆಗಡೆ. ವೃತ್ತಿರಂಗದ ವಿಶಾಲ ಅನುಭವ – ಲೋಕಗ್ರಹಿಕೆ ಅವರ ಕಥೆಗಳಿಗೆ ವಿಭಿನ್ನ ಮೆರುಗು ನೀಡುತ್ತವೆ. ಪ್ರಕಟಿತ ಕೃತಿಗಳು: ಒಂದು ತಗಡಿನ ಚೂರು, ಒಳ್ಳೆಯವನು, ವಾಸನೆ ಶಬ್ದ ಬಣ್ಣ ಇತ್ಯಾದಿ (ಕಥಾಸಂಕಲನಗಳು), ಅಶ್ವಮೇಧ (ಕಾದಂಬರಿ), ಕುರುಡುಕಾಂಚಾಣ (ಅಂಕಣ ಬರಹಗಳು), ಭೂಸ್ವಾಧೀನ ಪ್ರಕ್ರಿಯೆ ಮತ್ತು ಪರಿಹಾರದ ಎರಡು ಹೊಸ ದಾರಿಗಳು ...

READ MORE

Related Books