‘ಕೊನೆಯ ಸದ್ದು’ ಶ್ರೀನಿವಾಸ ಜೋಕಟ್ಟೆ ಅವರ ಕಥಾಸಂಕಲನವಾಗಿದೆ. ಇತ್ತೀಚಿನ ಯುವ ಮನಸ್ಸುಗಳನ್ನು ಗ್ರಹಿಸುತ್ತ ಸುತ್ತಲಿನ ಘಟನೆ ಗಳನ್ನಾಯ್ದು ಅಚ್ಚುಕಟ್ಟಾಗಿ ಹೊಸಲೋಕವೊಂದನ್ನು ಸೃಷ್ಟಿಸುವಂತೆ ನೈಜ ಕಥೆಗಳನ್ನು ಈ ಕಥಾಸಂಕಲನದಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ.
ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ. ...
READ MOREಹೊಸತು-2004- ಎಪ್ರಿಲ್
ಇತ್ತೀಚಿನ ಯುವ ಮನಸ್ಸುಗಳನ್ನು ಗ್ರಹಿಸುತ್ತ ಸುತ್ತಲಿನ ಘಟನೆ ಗಳನ್ನಾಯ್ದು ಅಚ್ಚುಕಟ್ಟಾಗಿ ಹೊಸಲೋಕವೊಂದನ್ನು ಸೃಷ್ಟಿಸುವಂತೆ ನೈಜ ಕಥೆಗಳನ್ನು ಬರೆಯಬಲ್ಲವರು ಶ್ರೀ ಜೋಕಟ್ಟೆ, ಮುಂಬೈ ಮಾಯಾನಗರಿಯ ಒಳಹೊರಗನ್ನೆಲ್ಲ ಬಲ್ಲ ಇವರಿಗೆ ಕಥಾಪಾತ್ರಗಳನ್ನು ಸೃಷ್ಟಿಸುವುದೊಂದು ಚಿಟಿಕೆ ಹೊಡೆದಂತೆ ! ದಟ್ಟ ಗ್ರಾಮೀಣ ಅನುಭವವನ್ನೂ ಅತ್ತ ನಗರದ ಸಂಕೀರ್ಣ ಬದುಕನ್ನೂ ಸರಿದೂಗಿಸಿಕೊಂಡು ಎರಡು ದಡಗಳಿಗೂ ಸೇತುವೆಯಂತೆ ಕಟ್ಟಿದ ಕಥೆಗಳು, ಗಾಂಧಿ ಯಿಂದ ಗಾವಿವರೆಗೆ ಬರೆಯಬಲ್ಲ ಇವರ ಹಿಂದಿನ ಸಂಕಲನ ಹೃದ್ಗತವಾಗಿದೆ.