ತಾಯಿಯಾಗಿ, ಹಾಗೂ ಅಜ್ಜಿಯಾಗಿ ಮಕ್ಕಳ ಹಾಗೂ ಮೊಮ್ಮಕ್ಕಳ ಬಾಲ್ಯದ ಅತ್ಯಂತ ಸುಂದರವಾದ ಘಟನೆಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ, ಮಕ್ಕಳ ಆಟಪಾಠಗಳನ್ನು ಮಕ್ಕಳಂತೆಯೇ ಗಮನಿಸಿ ಅವುಗಳಿಗೆ ಹೊಸ ಅರ್ಥವನ್ನು ಕಲ್ಪಸಲಾಗಿದೆ.ನಮ್ಮ ಆಸೆಗೂ ಬುದ್ಧಿವಂತಿಕೆಗೂ ಪರಿಸರವನ್ನು ಏರುಪೇರು ಮಾಡದೆ, ಕುತೂಲಹ, ಪ್ರೀತಿಗಳಿಂದ ಅವನ್ನೂ ಅರಿಯುತ್ತ ಬಾಳುವುದು ವಿವೇಕ. ಪುಟ್ಟ ಮಕ್ಕಳ - ಎಳೆಯರ ಅಪರಿಮಿತವಾದ ಕಲ್ಪನಾ ಶಕ್ತಿಗೆ ನಿರ್ಮಲ ಮನಸ್ಸಿಗೆ ಇದು ನಾಟಬೇಕು ಎಂಬುದು ಲೇಖಕಿಯ ಅಭಿಮತ.
ರುಕ್ಕಮ್ಮ ಬಿ.ಎಸ್. ಅವರು ಎಂ.ಎ.(ಕನ್ನಡ) ಸ್ನಾತಕೋತ್ತರ ಪದವೀಧರರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ೨೩-೯-೧೯೩೪ ರಂದು ಮೈಸೂರಿನ ಬಿ.ಟಿ. ಶ್ರೀನಿವಾಸ ಐಯ್ಯಂಗಾರ್, ಸೀತಮ್ಮ ದಂಪತಿಗಳಿಗೆ ಮಗಳಾಗಿ ಜನಿಸಿದರು. ಇವರ ಕೃತಿಗಳು : ಶಾಲೆಯ ಮಕ್ಕಳು (ಕಾದಂಬರಿ) ೧೯೫೮. ಅನುವಾದ: ಕೀಟಗಳ ಒಡನಾಡಿ ಫೇಬರ್ ಜೀವನ ಮತ್ತು ಕೃತಿ ೧೯೬೦, ಸಮ್ಮುಕ್ತ ಕೌಮುದೀ ಸಂಗ್ರಹ (ಸಂಪಾದಿತ) ೧೯೬೩, ಮೇರಿಕ್ಯೂರಿ ಜೀವನ ಚರಿತ್ರೆ ೧೯೬೮, ಪಾಪು ಅಮ್ಮನಿಗೆ ಹೇಳಿದ ಕಥೆಗಳು (ಮಕ್ಕಳ ಸಾಹಿತ್ಯ) ೧೯೭೧, ಕಚ (ವ್ಯಕ್ತಿಚಿತ್ರ) ೧೯೭೩, ಹರಿಹರ ೧೯೭೩, ವ್ಯಾಪಾರಿ ನುಂಗಣ್ಣ (ಮಕ್ಕಳ ಸಾಹಿತ್ಯ) ...
READ MORE