ಜಪಾನ್ನ ಪ್ರಸಿದ್ದ ಸಮಕಾಲೀನ ಲೇಖಕ ಹರುಕಿ ಮುರಕಮಿಯ ಆಯ್ದ ಕತೆಗಳನ್ನು ಲೇಖಕ ಮಂಜುನಾಥ ಚಾರ್ವಾಕ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹರುಕಿ ಮುರಕಮಿ ಎರಡನೆಯ ವಿಶ್ವಯುದ್ದದ ನಂತರ ಕ್ಷಿಪ್ರಗತಿಯಲ್ಲಿ ಕೈಗಾರೀಕರಣಗೊಂಡ ಜಪಾನ್ನ ಆರ್ಥಿಕ ಬೆಳವಣಿಗೆಯು ನಗರಗಳ ಜನಜೀವನದ ಸಂರಚನೆಯಲ್ಲಿ ಮಾಡಿರುವ ಪರಿಣಾಮವನ್ನು ಅದ್ಭುತವಾಗಿ ಚಿತ್ರಿಸುತ್ತಾರೆ. ಮೂಲಭೂತವಾಗಿ ಮುರಕಮಿಯ ಬರವಣಿಗೆಯು ಜಪಾನಿನ ಸಮುದಾಯ ಸಂಸ್ಕೃತಿಯಿಂದ ತಪ್ಪಿಸಿಕೊಂಡು ಹೆಚ್ಚು ವೈಯಕ್ತಿಕ ಜೀವನಶೈಲಿಯನ್ನು ಶೋಧಿಸುತ್ತದೆ.
ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಮಂಜುನಾಥ ಚಾರ್ವಾಕ ಅವರು, ಲ್ಯಾಂಡ್ ಸ್ಕೇಪ್ ಪೋಟೋಗ್ರಫಿ, ಕಥನ, ಕಲಾವಿಮರ್ಶೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಇವರು ಸದ್ಯ ಬೆಂಗಳೂರು ನಿವಾಸಿ. ಕೃತಿಗಳು: ಕಿನೊ ಮತ್ತು ಇತರ ಕತೆಗಳು ...
READ MORE