ಕೆಂಪು ಹುಡುಗಿ ಕಪ್ಪು ಕಾಲ್ಮರಿ

Author : ಶಂಕರ ಮಲ್ಲಪ್ಪ ಬೈಚಬಾಳ

Pages 142

₹ 150.00




Year of Publication: 2022
Published by: ಬೆರಗು ಪ್ರಕಾಶನ
Address: ವಿನಾಯಕ ನಗರ, ಆಲಮೇಲ 586202, ವಿಜಯಪುರ ಜಿಲ್ಲೆ.
Phone: 7795341335

Synopsys

ಪ್ರಾದೇಶಿಕ ಕನ್ನಡದ ಆಡುನುಡಿಗಳನ್ನು ಬಳಸಿ ಬರೆಯುವ ರಚನೆಗಳು ಸ್ವಾನುಭವದ ಅಭಿವ್ಯಕ್ತಿಯಾಗಿರುತ್ತವೆ ಎಂಬ ಜಿಜ್ಞಾಸೆಯೊಂದು ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಹೊಸಗನ್ನಡ ಸಾಹಿತ್ಯದ ಆರಂಭಕಾಲದಿಂದಲೂ ಪ್ರಚಲಿತವಾಗಿದೆ. ಕುಂ. ವೀರಭದ್ರಪ್ಪನವರ ಬೇಲಿ ಮತ್ತು ಹೊಲ, ದೇವನೂರು ಮಹಾದೇವರ ಕುಸಮ ಬಾಲೆ, ಚನ್ನಣ್ಣ ವಾಲಿಕಾರರ ಬೆಳ್ಯ, ಶಾಂತರಸರ ಮತ್ತು ಗೀತಾನಾಗಭೂಷಣರ ಕಥೆ ಮತ್ತು ಕಾದಂಬರಿಗಳಲ್ಲಿ ಮಾಡಲಾದ ಭಾಷೆಯ ಪ್ರಯೋಗಗಳನ್ನು ಈ ಜಿಜ್ಞಾಸುಗಳು ಇದಕ್ಕೆ ಉದಾಹರಿಸುತ್ತಾರೆ. ಇಂಥದೇ ಪ್ರಾದೇಶಿಕ ಸೊಗಡಿನ ಜನಪದೀಯ ಭಾಷೆಯ ನುಡಿಗಟ್ಟುಗಳು, ಸೂಳ್ಳುಡಿಗಳು ಮತ್ತು ಗಾದೆಗಳ ಸಾರ್ಥಕ ಬಳಕೆಯಿಂದ “ಕೆಂಪು ಹುಡುಗಿ ಕಪ್ಪು ಕಾಲ್ಕರಿ” ಸಂಕಲನದ ಕಥೆಗಳು ವಿಜೃಂಭಿಸುತ್ತವೆ. ಕರ್ನಾಟಕದ ಒಳನಾಡು ಮತ್ತು ಮರಾಠಿ ಪ್ರಭಾವದ ಗಡಿನಾಡಿನ ಪರಿಸರದ ದಟ್ಟ ವಿವರಗಳನ್ನು ತಿಳಿಯಾದ ಭಾಷೆಯಲ್ಲಿ ಈ ಕಥೆಗಳು ಕಟ್ಟಿಕೊಡುತ್ತವೆ. ಲೇಖಕರಿಗೆ ಈ ಪ್ರದೇಶದ ಸಾಮಾಜಿಕ, ಧಾರ್ಮಿಕ ಸಂದರ್ಭಗಳು ಅದೆಷ್ಟು ರ್ಪಕ್ಟ ಎಂದರೆ ಯಾವ ಕಥೆಯಲ್ಲಿಯೂ ಕಾಲ್ಪನಿಕತೆ, ಕೃತಕತೆಯ ಚಿತ್ರಣಗಳು ಇಲ್ಲ. - (ತೀರ್ಪುಗಾರರ ಟಿಪ್ಪಣಿಯಿಂದ)

About the Author

ಶಂಕರ ಮಲ್ಲಪ್ಪ ಬೈಚಬಾಳ
(22 July 1966)

ಸಾಹಿತಿ ಶಂಕರ ಮಲ್ಲಪ್ಪ ಬೈಚಬಾಳ ಅವರು ಬಿಜಾಪುರ ಜಿಲ್ಲಾ ಬಸವನ ಬಾಗೇವಾಡಿ ತಾ, ಮಸಬಿನಾಳದಲ್ಲಿ 1966 ಜುಲೈ 22ರಂದು ಜನಿಸಿದರು. ಜಾನಪದ ಗಾಯಕ, ಚಿತ್ರಕಲಾವಿದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದರು. 150ಕ್ಕೂ ಹೆಚ್ಚು ಜಾನಪದ, ಐತಿಹಾಸಿಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥೆ, ಕವಿತೆ, ವಿಮರ್ಶೆ, ಚುಟುಕಗಳು ಇತರರ ಸಂಕಲನಗಳಲ್ಲಿಯೂ ಸೇರಿವೆ. ಪುಣೆಯ ಯಂಗ್ ಸ್ಟಾರ್ ಅಸೋಸಿಯೇಷನ್‌ದ ಕನ್ನಡ ಕಾರ್ಯಕ್ರಮದಲ್ಲಿ ಮೈಸೂರಿನ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಬೇರೆ, ಬೇರೆ ಬಾನುಲಿ ಕೇಂದ್ರಗಳಿಂದ  ಭಾಷಣಗಳು ಪ್ರಸಾರವಾಗಿವೆ. ಇವರ ಪ್ರಮುಖ ಕೃತಿಗಳೆಂದರೆ ಶತಾಯುಷಿ ಸೊನ್ನದ ಶಿವಾನಂದ ಅಪ್ಪಗಳು, ವಚನ ಮಾಂಗಲ್ಯ, ಅದೇನ ಕಾಗದಂತಿ, ಭೀಮಾರಥಿ, ರಾಜಗುರು, ಸೈತಾನ ...

READ MORE

Related Books