ಕೌತುಕಗಳ ಮಾಯಾಜಾಲ ಮಡಿಕೇರಿ ನಿವಾಸಿ ಡಾಕ್ಟರ್ ಸೂರ್ಯ ಕುಮಾರ್ ಅವರ ಎರಡನೇ ಕೃತಿ. ಇವರು ವೈದ್ಯ ಹಾಗೂ ವಿಧಿ ವಿಜ್ಞಾನ ತಜ್ಞರು. ಈ ಪುಸ್ತದಲ್ಲಿ ಇಪ್ಪತ್ತು ಸಣ್ಣ ಕಥೆಗಳಿವೆ. ಇವುಗಳು ಎಲ್ಲವೂ ಲೇಖಕರು, ಅವರ ವೈದ್ಯಕೀಯ ಜೀವನದಲ್ಲಿ ನೋಡಿದ, ಚಿಕಿತ್ಸೆ ಮಾಡಿದ, ಮತ್ತು ವಿಧಿ ವಿಜ್ಞಾನಕ್ಕೆ ಸಂಬಂಧಪಟ್ಟ ವಿವರಗಳನ್ನು ಆದರಿಸಿ ಬರೆದ ಕಥೆಗಳು. ಇಲ್ಲಿ ಕೆಲವೆಡೆ ಮೊದಲಿಗೆ ಸಾಮಾನ್ಯವೆಂದು ಕಾಣುವ ಕೇಸುಗಳು ಹೇಗೆ ಜಟಿಲವಾಗುತ್ತಾ ಹೋಗ ಬಹುದು ಮತ್ತು ತುಂಬಾ ವಿಶೇಷವೆಂದು ಪರಿಗಣಿಸಿರುವ ಕೇಸುಗಳು ಕೊನೆಗೆ ಹೇಗೆ ಸಾಮಾನ್ಯವೆಂದು ತಿರುಗಿ ನಿಲ್ಲ ಬಹುದು ಎನ್ನುವುದರ ಬಗ್ಗೆ ಕಥೆಗಳು ಇವೆ. ಮರಣೋತ್ತರ ಪರೀಕ್ಷೆ ಆಧಾರಿತ, ಪತ್ತೇದಾರಿ ರೀತಿಯ ಕೆಲವು ಕಥೆಗಳು ಇಲ್ಲಿವೆ. ಮೂಢನಂಬಿಕೆಯಿಂದ ಆಗುವ ತೊಂದರೆಗಳ ಬಗ್ಗೆಯೂ ಇಲ್ಲಿ ಕಥೆಗಳು ಇದೆ.
1950ನೇ ಇಸವಿಯಲ್ಲಿ ಸೋಮವಾರ ಪೇಟೆಯಲ್ಲಿಜನಿಸಿದರು.ಇವರ ತಂದೆ ಬಾಲಕೃಷ್ಣ ,ತಾಯಿ ನೀಲಮ್ಮ. ಪೋಷಕರು ಅಧ್ಯಾಪಕರಾಗಿ ಕೊಡಗಿನ ಎಲ್ಲಾ ಕಡೆ ಕೆಲಸ ಮಾಡುತ್ತಿದ್ದರಿಂದ ,ಡಾಕ್ಟರ್ ಸೂರ್ಯ ಕುಮಾರ್ ಅವರು ಬಾಲ್ಯವನ್ನು ಭಾಗಮಂಡಲ, ಸಂಪಾಜೆ , ಮಡಿಕೇರಿಯ ಸರಕಾರಿ ಪ್ರೌಢಶಾಲೆಯಲ್ಲಿ, ( ಕನ್ನಡ ಮಾಧ್ಯಮದಲ್ಲಿ), ಪಿ ಯು ಸಿ ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ನಂತರ ಎಂ .ಬಿ. ಬಿ.ಎಸ್ ಮೈಸೂರಿನ ಸರಕಾರಿ ಕಾಲೇಜಿನಲ್ಲಿ. ಬೆಂಗಳೂರಿನ ಸರಕಾರೀ ವೈದ್ಯಕೀಯ ಕಾಲೇಜನಲ್ಲಿ ವಿಧಿ ವಿಜ್ಞಾನ ವಿಷಯ ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವೀರ ರಾಜಪೇಟೆ, ಸಂಪಾಜೆ ,ಬೆಂಗಳೂರು, ಮತ್ತು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಇವರ ...
READ MORE