ಕಥೆ ಕಥಾನಕ ಪ್ರಸಂಗ-2011-2020

Author : ಕೆ. ಸತ್ಯನಾರಾಯಣ

Pages 232

₹ 250.00




Year of Publication: 2020
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: ನಂ. 60. 2 ಡಿ ಕ್ರಾಸ್, 2ನೇ ಹಂತ, 3ನೇ ಮಹಡಿ, ನಾಗರಬಾವಿ, ಬೆಂಗಳೂರು-72
Phone: 9740066842

Synopsys

‘ಕಥೆ ಕಥಾನಕ ಪ್ರಸಂಗ-2011-2020’ ಕನ್ನಡದ ಖ್ಯಾತ ಕತೆಗಾರರಲ್ಲಿ ಒಬ್ಬರಾದ ಕೆ. ಸತ್ಯನಾರಾಯಣ ಅವರ ಕತಾ ಸಂಕಲನ. ಇಲ್ಲಿನ ಕತೆಗಳು ವರ್ತಮಾನದಲ್ಲಿ ಇಡೀ ವಿಶ್ವ ಎದುರಿಸುತ್ತಿರುವ ತಲ್ಲಣಗಳನ್ನು ಕಣ್ಣ ಮುಂದೆ ಇಡುತ್ತವೆ. ಜೊತೆಗೆ ಜಾಗತೀಕರಣದಿಂದಾದ ಪಲ್ಲಟಗಳು, ಬದಲಾದ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ, ಸಾಹಿತ್ಯಿಕ ಸಂಕಥನಗಳನ್ನು ಚರ್ಚಿಸುತ್ತವೆ. ಈ ಕೃತಿಯಲ್ಲಿ ಡಾಕ್ಟರನ ಹುಚ್ಚು ಮಗು, ಹೆಗ್ಗುರುತು, ಮಾಸ್ತಿಗನ್ನಡಿ, ನಿಜ ಕವಲು, ಭಾಷೆ ಮತ್ತು ನಗು, ಅಮೆರಿಕಾದಲ್ಲಿ ಸೀಸದ ಕಡ್ಡಿ, ಸಾವಿನ ಬಣ್ಣ, ಬಣ್ಣ ಮತ್ತು ಬಣ್ಣ, ವೈಶಂಪಾಯನದಲ್ಲಿ ಪಾಲು, ಸ್ವಾಮಿ ಮತ್ತು ನಾಯಿ, ದಾಟದ ಮೂರು, ಅಮೆರಿಕನ್ ಮನೆ, ಯಾಕೂಬ್ ನಲಗೊಂಡ, ವಿಷಣ್ಣ ಶೋಧ, ವಿಲೋಮವೋ ಅನುಲೋಮವೋ, ಸ್ವರ್ಗದ ಸ್ವಭಾವ, ಅಜ್ಜಿ ಮತ್ತು ಧೂಳು, ದೇವರಿಗೆ ಹೇಳಲಿಲ್ಲ ತಾನೇ, ದಲಿತರ ಸೌಮ್ಯೋಪಖ್ಯಾನ, ಚರಿತ್ರೆಗೊಂದು ಪ್ರಣಾಳಿಕೆ, ನಾನು ನಂಬಿದ ವೇಶ್ಯಾ ವಿಲಾಸ ಸೇರಿದಂತೆ ಹಲವು ಕತೆಗಳು ಸಂಕಲನಗೊಂಡಿವೆ.

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books