ಕಥೆ ಹೇಳುವೆ ಬಾ ಕಂದ

Author : ಪರಿಮಳಾ ರಾವ್ ಜಿ.ಆರ್

Pages 136

₹ 80.00




Year of Publication: 2011
Published by: ಸಿವಿಜಿ ಇಂಡಿಯಾ
Address: ಕಸ್ತೂರ್ ಬಾ ಭವನ, ಗಾಂಧಿಭವನ ಆವರಣ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001

Synopsys

`ಕಥೆ ಹೇಳುವೆ ಬಾ ಕಂದ’ ಕೃತಿಯು ಜಿ. ಆರ್. ಪರಿಮಳಾರಾವ್ ಅವರ ಕತಾಸಂಕಲನವಾಗಿದೆ. ಕೃತಿಯ ಕುರಿತು ಪ್ರಸ್ತಾವನೆ ನೀಡಿರುವ ಜಿ. ಆರ್. ಪರಿಮಳಾರಾವ್ ಅವರು, ಕಥೆಗಳೆಂದರೆ ಮಕ್ಕಳಿಗೆ ಪಂಚಪ್ರಾಣ. ಆಡುತ್ತಿರುವ ಮಕ್ಕಳೂ ‘ಕಥೆ ಹೇಳುವೆ ಬಾ ಕಂದ!’ ಎಂದೊಡನೆ ಓಡಿ ಬಂದು ಕೈಕಟ್ಟಿ ಕೂಡುತ್ತಾರೆ. ಕಥೆ ಹೇಳುತ್ತಾ ಅವರ ಕಣ್ಣಲ್ಲಿ ಮಿಂಚುಮೂಡುತ್ತದೆ. ಹೂರಣದ ಹೋಳಿಗೆ, ಕಡುಬು ಮೆದ್ದಂತೆ ರುಚಿಕರವೆನಿಸುತ್ತದೆ. ಒಂದು ಕತೆ ಮುಗಿದರೆ ಮತ್ತೊಂದು, ಮಗದೊಂದು ಎಂದು ಅಂಗಲಾಚುವ ಮಕ್ಕಳಿಗೆಷ್ಟು ಕಥಗಳು ಹೇಳಿದರೂ ಸಾಲದು. ಅವು ಆಯಸ್ಕಾಂತದ ಚುಂಬಕ ಶಕ್ತಿಯಂತೆ ಆಕರ್ಷಿಸುತ್ತವೆ. ಇಲ್ಲಿರುವ ಕತೆಗಳು ಅಕ್ಷರ ಸಹ ಭಾಷಾಂತರವೆನ್ನಲಾಗದು. ಕೆಲವು ಮಾರ್ಪಾಟುಗಳು. ಕಲ್ಪನೆಗಳು ಸಂದರ್ಭೋಚಿತ ತಿರುವುಗಳಿಂದ ಇವು ತಮ್ಮ ಹೊಸ ರೂಪ, ಉಡುಪನ್ನು ತೊಟ್ಟು ಕನ್ನಡ ಕಂದನಿಗೆ ಹೇಳುವ ಕಥೆಗಳಾಗಿವೆ. ಇವು ಮಕ್ಕಳಿಗೆ ಸದಭಿರುಚಿಯನ್ನು ಜ್ಞಾನ ದಾಹವನ್ನು ಹೆಚ್ಚಿಸಿ, ಪುಸ್ತಕ ಪ್ರಿಯತೆಯನ್ನು ಮೂಡಿಸುತ್ತದೆ. ಮಕ್ಕಳಿಗಾಗಿ ಬರೆದ ಈ ಕಥೆಗಳು ಮಕ್ಕಳ ಮನವೊಲಿಸುವುದರಲ್ಲಿ ಸಂದೇಹವಿಲ್ಲ'  ಎಂದಿದ್ದಾರೆ.

About the Author

ಪರಿಮಳಾ ರಾವ್ ಜಿ.ಆರ್
(06 January 1941)

ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ.  ...

READ MORE

Related Books