ವಿಜಯ ಕರ್ನಾಟಕ ಬಳಗ 2015ರಿಂದ ಕಥಾಸ್ಪರ್ಧೆ ಏರ್ಪಡಿಸುತ್ತಿದ್ದು ತನ್ನ ನಾಲ್ಕನೇ ಆವೃತ್ತಿಯ ಸ್ಪರ್ಧೆಗೆ ಬಂದ ಆಯ್ದ ಅತ್ಯುತ್ತಮ ಕತೆಗಳನ್ನು ಸೇರಿಸಿ ’ಕಥಾಚೈತ್ರ ಟಾಪ್ 25 ಕಥೆಗಳು’ ಎಂಬ ಪುಸ್ತಕ ಹೊರತಂದಿದೆ.
ಕವಯತ್ರಿ ಪ್ರತಿಭಾ ನಂದಕುಮಾರ್, ಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ತೀರ್ಪುಗಾರರಾಗಿದ್ದ ಸ್ಪರ್ಧೆಯಲ್ಲಿ ಒಟ್ಟು 450 ಕತೆಗಾರರು ಭಾಗವಹಿಸಿದ್ದರು.ವಿದ್ಯಾಧರ ಮುತಾಲಿಕ ದೇಸಾಯಿ ಅವರ ‘ಮಹಾಮಾನವರು’ ಕಥೆ 10 ಸಾವಿರ ರೂಪಾಯಿ ಮೌಲ್ಯದ ಪ್ರಥಮ ಬಹುಮಾನಕ್ಕೆ ಪಾತ್ರವಾಗಿತ್ತು. ಮಮತಾ ಆರ್. ಅವರ ‘ಸಂದರ್ಶನ’ ಕಥೆ ದ್ವಿತೀಯ ಬಹುಮಾನ ಹಾಗೂ ಅಕ್ಷಯ ಪಂಡಿತ್ ಸಾಗರ ಅವರ ‘ಭಾರತ್ ಸಿಟಿ’ ಕಥೆ ತೃತೀಯ ಬಹುಮಾನ ಪಡೆದಿದ್ದವು. ಅಲ್ಲದೆ ನಾಲ್ಕು ಕಥೆಗಳಿಗೆ ಮೆಚ್ಚುಗೆ ಬಹುಮಾನವನ್ನೂ ನೀಡಲಾಗಿತ್ತು.
ವಿಜಯ ಕರ್ನಾಟಕ ಬಳಗ ಈ ಹಿಂದೆಯೂ ಕಥಾಸ್ಪರ್ಧೆಗಳನ್ನು ಏರ್ಪಡಿಸಿ ಅವುಗಳ ಸಂಕಲನವನ್ನು ತಂದಿದೆ ಎನ್ನುವುದು ಗಮನಾರ್ಹ.
.