ಅನರ್ಥ ಕಥಾಸಂಕಲನದಲ್ಲಿರುವ ಒಂದು ಕತೆಯ ಶೀರ್ಷಿಕೆಯೇ ಕಥಾಸಂಕಲನಕ್ಕೆ ಇರಿಸಲಾಗಿದೆ.ಸಂಕಲನದ ಕೊನೆಯಲ್ಲಿ ಪತ್ರಿಕೆಗಳಲ್ಲಿ ಕತೆಗೆ ಪ್ರತಿಕ್ರಿಯಿಸಿದ ಓದುಗರ ಅನಿಸಿಕೆಗಳನ್ನು ಯಥಾವತ್ತಾಗಿ ಬಳಸಿಕೊಂಡಿರುವುದು ವಿಶೇಷ. ವ್ಯಕ್ತಿಯ ಜೀವಿತವು ಕಾಲದೊಂದಿಗೆ ಸಮನಾಂತರದಲ್ಲಿ ಕಳೆಯುವ ಪರಿಯನ್ನು ಮತ್ತು ಅದು ಯಾರೊಬ್ಬರಿಗಾಗಿ ಕಾಯುವುದಿಲ್ಲ ಎಂಬ ಅಂಶವನ್ನು ತಿಳಿಯಪಡಿಸುವ ಕತೆಗಳು ಮಿನಿ ಕತೆಯ ಭಾವ ಲಹರಿಯಿಂದ ಸ್ವಲ್ಪ ಭಿನ್ನವಾಗಿ ತೋರುತ್ತವೆ. ಪುಸ್ತಕ ಗಾತ್ರದಲ್ಲಿ ತೂಕದಾಗಿ ಕಾಣಿಸುವುದರಿಂದ ಹೆಚ್ಚಿನ ಕತೆಗಳನ್ನು ಓದಲು ಸಮಯವನ್ನು ಹೊಂದಿಸಿಕೊಳ್ಳಬಹುದಾಗಿದೆ.ಕೃಷ್ಣ ರಾಯಚೂರು ಮುಖಪುಟ ಕುತೂಹಲ ಹುಟ್ಥಿಸುವಂತಿದೆ.
’ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...
READ MORE