‘ಕತೆ ಡಬ್ಬಿ’ ರಂಜನಿ ರಾಘವನ್ ಅವರ ಕತಾಸಂಕಲನವಾಗಿದೆ. ಚಿತ್ರ ನಿರ್ದೇಶಕರಾದ ಜಯತೀರ್ಥ ಅವರು ಕೃತಿಯ ಕುರಿತು, `ನಿಜವಾದ ಪ್ರೀತಿಗೆ ತಾಳ್ಮೆ ಇರುತ್ತೆ. ಇನ್ನೊಬ್ಬರಿಗೋಸ್ಕರ ನಿರ್ಧಾರಾನ ಬದಲಾಯಿಸಬೇಡಿ. ಹೊಟ್ಟೆಪಾಡಿಗೆ ಅಂತ ಪಟ್ಟಣ ಹುಡ್ಕೊಂಡ್ ಹೋಗಿ ಬೇರು ಬಿಟ್ಟ ಗಿಡದ್ ತರ ಆಗ್ತೀವಿ. ಮನುಷ್ಯ ಸಮರ್ಥನೆಗಳನ್ನು ಕೊಟ್ಟುಕೊಳ್ಳದೇ ಬದುಕಲಾರ. ಕಳ್ಳನೂ, ಕೊಲೆಗಾರನೂ ತನ್ನ ತಪ್ಪಿಗೆ ಬಲವಾದ ಕಾರಣವಿದೆ ಅಂದುಕೊಂಡಾಗಲೇ ನಿದ್ರೆ ಮಾಡಲು ಸಾಧ್ಯ. ರಂಜನಿ ರಾಘವನ್ ಬರೆದಿರುವ ಕತೆಗಳಲ್ಲಿ ವ್ಯಕ್ತವಾಗುವ ಈ ಮೂರೂ ಸಾಲುಗಳು ಅವರು ಲೇಖಕಿಯಾಗಿ ಸಾಗುತ್ತಿರುವ ಏರು ಗತಿಯನ್ನು ತೋರುತ್ತದೆ. ಸಾಮಾನ್ಯವಾಗಿ ಲೇಖಕರು ಕತೆಗಳನ್ನು ಬರೆಯಲು ಮುಂದಾದಾಗ ಕ್ರಮೇಣ ಸಂಪ್ರದಾಯದ ಹೊರೆ ಕಳಚಿ ಸತ್ಯಕ್ಕೆ ಹತ್ತಿರವಾಗುವ ಪ್ರಾಮಾಣಿಕ ಪ್ರಯತ್ನ ಪಡುತ್ತಾರೆ. ಆ ನಿಟ್ಟಿನಲ್ಲಿ ರಂಜನಿ ರಾಘವನ್ ಬಹಳ ವೇಗವಾಗಿ ಚಲಿಸುತ್ತಿದ್ದಾರೆ. ಅವರ ಕತೆಗಳಲ್ಲಿ ಸಂಬಂಧಗಳ ಸಂಕೀರ್ಣತೆ, ಮನುಷ್ಯನ ಸ್ವಾರ್ಥ, ಪ್ರಕೃತಿಯ ನಿರ್ಮಲತೆ, ಪ್ರಾಣಿಗಳ ಮೇಲಿನ ಲೇಖಕಿಯ ಪ್ರೀತಿ ಮತ್ತು ಅಪಾರ ಜೀವನ ಪ್ರೀತಿ ವ್ಯಕ್ತವಾಗುತ್ತದೆ. ಪಟ್ಟ ಪಾಡೇ ಹಾಡಾಗಿ ಪಲ್ಲವಿಸಬೇಕು ಎಂಬಂತೆ ಅವರ ಸಾಮಾಜಿಕ ಗ್ರಹಿಕೆಗಳು ಓದುಗರಲ್ಲಿ ಪ್ರಶ್ನೆಗಳ ಮೂಡಿಸುವುದರ ಜೊತೆಗೆ, ಅಚಾನಕ್ಕಾಗಿ ಕೊನೆಗೊಳ್ಳುವ ಮುದ್ದಾದ ಅಂತ್ಯಗಳು ಮುದವನ್ನೂ ನೀಡುತ್ತವೆ. ಸರಳ ಭಾಷೆ, ಸರಳ ನಿರೂಪಣೆಯಲ್ಲಿ ಅಭಿವ್ಯಕ್ತಿಸುವ ಅವಳ ಕುಶಲಗಾರಿಕೆ ಮೆಚ್ಚತಕ್ಕದ್ದು' ಎಂದಿದ್ದಾರೆ.
ರಂಜನಿ ರಾಘವನ್ ಅವರು ಮೂಲತಃ ಬೆಂಗಳೂರಿನವರು. ಬರಹಗಾರ್ತಿ, ನಟಿ, ಸೃಜನಶೀಲ ನಿರ್ದೇಶಕಿಯೂ ಆಗಿದ್ದಾರೆ. ಪ್ರಸ್ತುತ ಕಲರ್‍ಸ್ ಕನ್ನಡದ ಕನ್ನಡತಿ ಧಾರವಾಹಿಯಲ್ಲಿ ನಟಿಯಾಗಿದ್ದಾರೆ. ಧಾರವಾಹಿಗಳು: ಪುಟ್ಟ ಗೌರಿ ಮದುವೆ (2014-2018), ಪೌರ್ಣಮಿ ತಿಂಗಳ್(2019), ಇಷ್ಟ ದೇವತೆ (2019-2020), ಕನ್ನಡತಿ(2020). ಸಿನಿಮಾಗಳು: ರಾಜಹಂಸ(2017), ತಕ್ಕರ್(2018), ಸತ್ಯಂ(2019), ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ(2021), ಹಾಕೂನ ಬಟಟ(2021). ಕೃತಿಗಳು: ಕತೆ ಡಬ್ಬಿ, ಸ್ವೈಪ್ ರೈಟ್ ...
READ MORE