ಕಾಂತ (ಕಥಾ ಸಂಕಲನ)

Author : ಎಂ. ವ್ಯಾಸ

Pages 190

₹ 90.00




Year of Publication: 2010
Published by: ಶ್ರೀನಿವಾಸ ಪುಸ್ತಕ ಪ್ರಕಾಶನ
Address: #164/A, ಮೊದಲನೇ ಮಹಡಿ , ಎಂ. ಆರ್. ಎನ್ ಬಿಲ್ಡಿಂಗ್, ಕನಕಪುರ ಮೈನ್ ರೋಡ್, ಬಸವನಗುಡಿ, ಬೆಂಗಳೂರು -560004

Synopsys

ಖ್ಯಾತ ಕತೆಗಾರ ಎಂ. ವ್ಯಾಸ ಅವರ ‘ಕಾಂತ’ ಕೃತಿಯು ಕತಾಸಂಕಲನವಾಗಿದೆ. ಕೃತಿಯಲ್ಲಿ ತುಷಾರ, ಮಯೂರ, ಮಲ್ಲಿಗೆ, ಪ್ರಜಾವಾಣಿ, ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದ ಹದಿನಾಲ್ಕು ಕತೆಗಳಿವೆ. ಅವುಗಳೆಂದರೆ ಕಾಂತ, ವೇಷ, ವೃದ್ದ, ಹಿಮ, ಸ್ಪೋಟ, ಆಮೆ, ಮಾಂಸ, ದಾಹ, ಘಾತ, ಉರಿ, ಭೂಮಿ, ಕಿಡಿ, ಯುಗ, ಮತ್ತು ಶಿಲೆ. ಪುರಾಷಾರ್ಥಗಳಲ್ಲಿ ಒಂದಾದ ಕಾಮ ದೃಷ್ಟಿಕೇಂದ್ರವಾಗಿರುವ ಕತೆಗಳನ್ನು ಬರೆದಿರುವ ವ್ಯಾಸರು, ಹಳಗನ್ನಡದ ಜನ್ನನನ್ನು ನೆನಪಿಸುವ ಕತೆಗಾರ, ’ಹಿಮ’ ಗಟ್ಟುವ, ’ಕಿಡಿ’ ಯಾಗುವ , ’ಸ್ಪೋಟ’ ಗೊಳ್ಳುವ , ’ವೇಷ’ ಧರಿಸುವ ಕಾಮದ ವಿವಿಧ ಮುಖಗಳನ್ನು ಶೋಧಿಸುವ ಕತೆಗಳು ಈ ಸಂಕಲನದಲ್ಲಿದೆ. ಈ ಸಂಕಲನದ ’ಸ್ಪೋಟ’ ವ್ಯಾಸರ ಪ್ರಾತಿನಿಧಿಕ ಕತೆಗಳ ಸಾಲಿಗೆ ಸೇರುತ್ತದೆ.

About the Author

ಎಂ. ವ್ಯಾಸ

ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ್ತು ’ಸ್ನಾನ’ ಎಂಬ ಮೂರು ಕಿರು ಕಾದಂಬರಿಗಳ ಸಂಕಲನವನ್ನೂ ಪ್ರಕಟಿಸಿದ್ದರು. 'ಅಜಂತಾ’ ಎಂಬ ಮಾಸಪತ್ರಿಕೆಯನ್ನು ಒಂದು ...

READ MORE

Related Books