ಅನುವಾದಕಿ ಚೆನ್ನವ್ವ ಚಂದ್ರಶೇಖರ ವಸ್ತ್ರದ ಅವರ ಅನುವಾದಿತ ಸಣ್ಣ ಕತೆಗಳ ಸಂಕಲನ ‘ಕಕ್ಕೆ ಹೂ ನೆರಳಿನಲ್ಲಿ ನಾನು’ . ಲೇಖಕಿ ತಮ್ಸುಲಾ ಆವ್ ಅವರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತ ಇಂಗ್ಲಿಷ್ ಸಣ್ಣಕತೆಗಳನ್ನು ಅನುವಾದಕಿ ಚೆನ್ನವ್ವ ಚಂದ್ರಶೇಖರ ವಸ್ತ್ರದ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶುದ್ಧ ಕಾಲ್ಪನಿಕ ಕತೆಯಿಂದ ಆಧುನಿಕ ಸಣ್ಣಕತೆಗಳವರೆಗಿನ ಸಣ್ಣ ಕತೆಗಳನ್ನು ಈ ಸಂಕಲನ ಒಳಗೊಂಡಿದೆ. ಇಲ್ಲಿಯ ಕತೆಗಳು ಹೃದಯವಿದ್ರಾವಕ, ಜಾಣ್ಮೆ ಹಾಗೂ ವ್ಯಂಗ್ಯದಿಂದ ಕೂಡಿದ ಕತೆಗಳಾಗಿದ್ದು, ಮಾನವನ ಸ್ಥಿತಿಗತಿಯ ಆಳವದ ಅನುಭವವನ್ನು ಹೊರಸೂಸುತ್ತದೆ. ಕೃತಿಯ ಪರಿವಿಡಿಯಲ್ಲಿ ಕಕ್ಕೆ ಹೂ ನೆರಳಿನಲ್ಲಿ ನಾನು, ಬೇಟೆಗಾರ ಸಾವು, ವಾಯುನೆಲೆ ಮಾರಿದ ಹುಡುಗ, ಆ ಪತ್ರ, ಮೂವರು ಮಹಿಳೆಯರು, ಒಂದು ಸರಳ ಪ್ರಶ್ನೆ, ಸೋನ್ನೀ, ಯಾನ ಎಂಬ 8 ಸಣ್ಣ ಕತೆಗಳಿವೆ.
ಚೆನ್ನವ್ವ ಚಂದ್ರಶೇಖರ ವಸ್ತ್ರದ ಅವರು ಅಣ್ಣಿಗೇರಿಯ ಎಸ್.ಎ.ಪಿ.ಯು.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಶಾಂತಿನಾಥ ದೆಸಾಯಿಯವರ Bhabani Bhattacharya ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಲ್ಲದೆ ಹೊಮೆನ್ ಬೊರ್ಗೊಹೈನ್ ಅವರ The Sunset ಕೃತಿಯನ್ನು ಸೂರ್ಯಾಸ್ತ ಎಂಬ ಶಿರೋನಾಮೆಯಲ್ಲಿ ಅನುವಾದಿಸಿದ್ದಾರೆ. ಡಾ. ಎಸ್. ಎಂ. ಹುಣಶ್ಯಾಳರ The Lingayat Movement ಕೃತಿಯನ್ನು ಅವರು ಅನುವಾದಿಸಿದ್ದು, ಲಿಂಗಾಯತ ಚಳುವಳಿ ಎಂಬ ಶಿರೋನಾಮೆಯಲ್ಲಿ ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಪೀಠ, ಗದಗದಿಂದ ಪ್ರಕಟವಾಗಿದೆ. ...
READ MORE