‘ಕಗ್ಗಕ್ಕೊಂದು ನ್ಯಾನೋ ಕತೆ’ ವಿ. ಗೋಪಕುಮಾರ್ ಅವರ ಕಥಾ ಸಂಕಲನವಾಗಿದೆ. ಕಗ್ಗಗಳ ವ್ಯಾಖ್ಯಾನ ಹೊಸದೇನಲ್ಲ. ಒಂದು ಪುಟ್ಟ ಕಥೆಯ ಮೂಲಕ ಈ ಕಗ್ಗವನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಈ ಕೃತಿ ಕುರಿತು ಬೆನ್ನುಡಿಯಲ್ಲಿನ ಸಾಲುಗಳು ಹೀಗಿವೆ; ಡಿ.ವಿ.ಜಿಯವರ 'ಮಂಕುತಿಮ್ಮನ ಕಗ್ಗ' ಕನ್ನಡ ಸಾಹಿತ್ಯ ಲೋಕದ ಮೇರು ಕೃತಿ. ಪ್ರತಿಯೊಂದು ಪದ್ಯವೂ ವೇದಾಂತದ ಸಾರವನ್ನು ಹೊಂದಿದೆ. ಕಗ್ಗದ ಒಳಾರ್ಥವನ್ನು ತಾತ್ಪರ್ಯವಿಲ್ಲದೆ ಅರ್ಥಮಾಡಿಕೊಳ್ಳುವುದು ಕಷ್ಟ. ಕಗ್ಗವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಶ್ರೀ ಗೋಪಕುಮಾರ್ ಅವರು ಈ ವಿನೂತನ ಪ್ರಯತ್ನವನ್ನು ಮಾಡಿದ್ದಾರೆ. ಪ್ರತಿಯೊಂದು ಪದ್ಯದ ಸಾರವನ್ನು ನ್ಯಾನೊ ಕಥೆಯ ಮೂಲಕ ಅಭಿವ್ಯಕ್ತಪಡಿಸಿದ್ದಾರೆ. ಕಗ್ಗದಂತಹ ಕೃತಿಯನ್ನು ಜನಸಾಮಾನ್ಯರಿಗೆ ಹತ್ತಿರ ತರುವ ಉದ್ದೇಶವಿದು. ಡಿ.ವಿ.ಜಿಯವರ ತತ್ವ ಚಿಂತನೆ ಮತ್ತು ಸಿದ್ಧಾಂತಗಳನ್ನು ಲೇಖಕರು ಚೆನ್ನಾಗಿ ಅರ್ಥೈಸಿಕೊಂಡು ತಮ್ಮ ಅನುಭವಗಳನ್ನು ಅದಕ್ಕೆ ಒರೆ ಹಚ್ಚಿ ಮನಸ್ಸಿಗೆ ನಾಟುವಂತೆ ಇಲ್ಲಿನ ನ್ಯಾನೋ ಕಥೆಗಳನ್ನು ರಚಿಸಿದ್ದಾರೆ.
ಬರಹಗಾರ ವಿ.ಗೋಪಕುಮಾರ್ ಅವರು ಹುಟ್ಟಿದ್ದು ಮಂಡ್ಯದಲ್ಲಿ. ಕನ್ನಡ ಮತ್ತು ಇಂಗ್ಲಿಷ್ ಪದವೀಧರರು. ಫೋಟೊಗ್ರಫಿ, ನ್ಯಾನೋ ಕತೆಗಳ ರಚನೆ, ಕನ್ನಡ ಮತ್ತು ಮಲೆಯಾಳಂನಲ್ಲಿ ಸಣ್ಣ ಕತೆಗಳ ರಚನೆ, ಕಿರುಚಿತ್ರಗಳು ಮತ್ತು ಸಾಕ್ಷ್ಯಾಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ನಿರ್ದೇಶನದ ಎರಡು ಚಿತ್ರಗಳು ಕಿರುಚಿತ್ರಕ್ಕೆ ಅತ್ಯುತ್ತಮ ಪ್ರಾಯೋಗಿಕ ಕಿರುಚಿತ್ರ ಪ್ರಶಸ್ತಿ ಲಭಿಸಿದೆ. ಇವರ ಪ್ರಮುಖ ಕೃತಿಗಳೆಂದರೆ ಸಾವಿರ ರೆಕ್ಕೆಗಳ ಪುಸ್ತಕ, ಬೆಳದಿಂಗಳು ಮತ್ತು ಮಳೆ, ವಿಜಯೀಭವ ಹಾಗೂ ಎರಡು ಹನಿ ಮಳೆಯ ಮೋಡ ಮುಂತಾದವು. ...
READ MORE