‘ಕಾಡೊಂದಿತ್ತಲ್ಲ’ ಕೃತಿಯು ಶಶಿಧರ ವಿಶ್ವಾಮಿತ್ರ ಅವರ ಕತಾಸಂಕಲನವಾಗಿದೆ. ಹೆಸರು ಹೇಳುವಂತೆ ‘ಕಾಡೊಂದಿತ್ತಲ್ಲ’ ಎನ್ನುವುದು ನೆಲ, ನಾಡು, ಭೂಮಿ ಎಂಬ ಮೂಲಾಸೆರೆಯ ಮೇಲೆ ಎದ್ದ ಗುಡ್ಡ, ಬೆಟ್ಟ, ಗುಟ್ಟೆ, ಕೊರಕುಲು ಎಂಬುದರ ಮೇಲೆ ಬೀಳುವ ಬಿಸಿಲು, ಆಡುವ ಗಾಳಿ, ಹನಿಯುವ ಮಳೆಯ, ನೆಲದಡಿಯ ಸಾರವನ್ನುಂಡು, ಕಂಗೊಳಿಸುವ ಗೊಂಡಾರಣ್ಯ, ದಟ್ಟಾರಣ್ಯ, ಮಲೆನಾಡು, ಮರಕಾಡು, ಗಿಡಕಾಡು, ಕುರುಚಲು ಕಾಡು, ಹುಲ್ಲುಗಾವಲು, ಗೋಮಾಳ ಎಂಬಲ್ಲಿ ಬಗೆಬಗೆಯ ರೂಪ ಆಕಾರ ಬಣ್ಣಗಳಿಂದ ಮೈ ತಳೆದು ಬಂದು ಎಂದಿನದೋ ಚರಿತಾನುಕಥಗಳನ್ನು ಹಾಡಿನಲ್ಲಿ ಕುಣಿತದಲ್ಲಿ ಗಾಥೆಯಾಗಿಸಿದ ಪರಿ ಇಲ್ಲಿ ಕಾಣಬಹುದು. ಅಂದಿನ ಪರಿಸರದಲ್ಲಿ ಇದ್ದೂ ಇಲ್ಲದಂತಿರುವ ಕಾಡಾಡಿ ಸಿದ್ದರು ಅಲೆದಾಡಿ ಬೈರಾಗಿಗಳು, ಕಾಡಾಡಿ ಗಿಡಜನರು, ನಾಡಾಡಿ ಹಳ್ಳಿಯ ಮುಗ್ಧರು, ಊರಾಡಿಗಳು ಇದ್ದರು. ಎಂದಿನದೋ ಸಾಂಗತ್ಯವೀಗ ಹೆಚ್ಚುತ್ತಿರುವ ಜನತೆಯ, ಯಂತ್ರಗಳ ದಲಾದುಬಿಯಿಂದ ಏನಾಗುತ್ತಿದೆ ಎಂಬುದೇ ಮುಂತಿಳಿಯದೆ ಸಿಕ್ಕಿನಲ್ಲಿ ಬೇಯುವ ಬೇಗುದಿಯನ್ನು ಕಾಡಿನ ತೋಳ, ಊರಾಡಿ ನಾಯಿ, ಅಲೆದಾಡಿ ಬೈರಾಗಿ ಮೈತಳೆದು ನರೆದು ಹಾಡುತ್ತವೆ. ಆಕಾಶಕ್ಕೆ ಮೂತಿ, ಮುಖವೆತ್ತಿ ಹತಾಶೆಯಿಂದ ರೋದಿಸುತ್ತವೆ. ಈ ಅಳಲು ರಾಜಧಾನಿಯ ಮಂತ್ರಾಲಯದ ದಿಕ್ಕೆಡಿಸುತ್ತ ಇರುವುದಿಷ್ಟೇ, ಇಷ್ಟೊರಲಗೆ ಹದವಾಗಿ ಪಾಕಗೊಂಡು ಬೆರೆತು ಬಾಳಿದರೆ ಉಳಿವುಂಟು ಎನ್ನುವ ಎಚ್ಚರ ಹೇಳುತ್ತದೆ.
ಶಶಿಧರ ವಿಶ್ವಾಮಿತ್ರ ಅವರು ಬರಹಗಾರರು ಕೃತಿಗಳು: ಖಿಲ, ವಿಜ್ಞಾನಿಗಳ ಬೆಳಕು, ಬಯಲು (ಅನುವಾದ), ಸರಳ ಆರೋಗ್ಯ ವಿಜ್ಞಾನ, ಸಂಚಿ (ಆತ್ಮಕಥೆ), ಹಿಂದೂ ಧರ್ಮ ಭಾರತೀಯ ಪರಂಪರೆಯ ಬೆಳಕು, ಪದ ಕುಸಿಯೇ ನೆಲವಿಹುದು, ಸೃಷ್ಟಿಯ ರಂಗವಲ್ಲಿ. ...
READ MORE