ನಾವೆಲ್ಲಾ ಕೇಳುತ್ತಾ, ಒದುತ್ತಾ ಬೆಳೆದ ಮಕ್ಕಳ ಕಥೆಗಳಲ್ಲಿ ಪ್ರಾಣಿಗಳು ಮನುಷ್ಯರಂತೆ ಮಾತನಾಡುವುದು, ವರ್ತಿಸುವುದು ಸಾಮಾನ್ಯವಾಗಿದೆ. ಇವುಗಳಲ್ಲಿ ಪ್ರಾಣಿಗಳ ಮೂಲಸ್ವಭಾವವನ್ನು ಪರಿಗಣಿಸದೆ ಕಥೆಯನ್ನು ಹೆಣೆಯಲಾಗುತ್ತಿತ್ತು. ಸತ್ಯದ ಹಿರಿಮೆಯನ್ನು ಸಾರುವ ಪುಣ್ಯಕೋಟಿಯ ಪ್ರಸಿದ್ಧ ಕಥೆ ಇದಕ್ಕೆ ಒಂದು ಉದಾಹರಣೆ. ಇಂತಹ ಕಥೆಗಳ ಹಿಂದಿನ ನೀತಿ ಏನೇ ಇದ್ದರು, ಇವು ಪರಿಸರ ಮತ್ತು ವನ್ಯಜೀವಿಗಳ ಬಗೆಗೆ ಮಕ್ಕಳಲ್ಲಿ ಅವಾಸ್ತವಿಕ ಕಲ್ಪನೆಗಳನ್ನು ಮೂಡಿಸುತ್ತವೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಪ್ರಾಣಿಗಳು ಪ್ರಾಣಿಗಳಂತೆಯೇ ಬದುಕುತ್ತಾ ಮಾನವನೊಡನೆ ಸಹಬಾಳ್ವೆ ಮಾಡಿದ ಕಥೆಗಳು ಅಪರೂಪ. ಇಲ್ಲಿನ ಕಥೆಗಳು ಅಂತಹ ವಸ್ತುವನ್ನೊಳಗೊಂಡಿವೆ. ಪರಿಸರದ ಬಗೆಗಿನ ಕಾಳಜಿ ಮತ್ತು ಪ್ರಾಣಿಗಳ ಮೇಲಿನ ಪ್ರೀತಿಯನ್ನೂ ಇಂತಹ ಕಥಾವಸ್ತುವಿಗೆ ಸೇರಿಸಿದರೆ ಎಂತಹ ಅದ್ಭುತ ಮಿಶ್ರಣವಾಗಬಹುದು ಎಂಬುದನ್ನು ಆಸ್ವಾದಿಸಲು ಇಲ್ಲಿನ ಕಥೆಗಳನ್ನು ಓದಬೇಕು. ಕೆನೆತ್ ಆಂಡರ್ಸನ್ ಪ್ರಾಣಿಗಳ ಒಡನಾಟದ ಮತ್ತು ಕಾಡಿನ ಅನುಭವಗಳನ್ನು ಕಥಾರೂಪದಲ್ಲಿ ನಮ್ಮೆದುರಿಗೆ ಇಟ್ಟಿದ್ದಾರೆ. ತಮ್ಮ ಮುನ್ನುಡಿಯಲ್ಲಿ ಕೆನೆತ್ ಆಂಡರ್ಸನ್ ಬರೆಯುತ್ತಾರೆ. “ಈ ಪುಸ್ತಕವನ್ನು ಪ್ರತಿಯೊಂದು ಭಾರತೀಯ ಮಗುವೂ ಓದುವುದೆಂದು ನಾನು ಆಶಿಸುತ್ತೇನೆ. ಇವತ್ತು ಮತ್ತೊಮ್ಮೆ ಈ ಪುಸ್ತಕವನ್ನು ಓದಿದಾಗ ನನ್ನ ಒಳಗಣ್ಣುಗಳು ಕಳೆದುಹೋದ ಮತ್ತೊಂದು ಕಾಲವನ್ನು ಕಾಣುತ್ತಿವೆ. ಅದು ಅರ್ಧಶತಮಾನದ ಹಿಂದಿನ ಮತ್ತೊಂದು ಭಾರತ. ಆಗ ಭಾರತದ ಕಾಡುಗಳು ಎಣಿಸಲಾರದಷ್ಟು ವಿವಿಧ ಜಾತಿಯ ಪ್ರಾಣಿಗಳಿಂದ ತುಂಬಿತುಳುಕುತ್ತಿತ್ತು; ನದಿಗಳು ಶುಭ್ರವಾಗಿ ಹರಿಯುತ್ತಿದ್ದವು; ನದಿಗಳ ಮತ್ತು ತಂಗಾಳಿಯ ಸದ್ದಿಗಿಂತ ಜೋರಾಗಿ ಹಕ್ಕಿಪಕ್ಷಿಗಳ ಕಲರವ ಕೇಳುತ್ತಿತ್ತು. ಈ ಪುಟಾಣಿ ಪುಸ್ತಕ ಕಡೆಯ ಪಕ್ಷ ಒಂದು ಮಗುವಿನಲ್ಲಿ ಆಸಕ್ತಿ ಮೂಡಿಸಿ, ಶಿಕ್ಷಣ ನೀಡಿ ಅದನ್ನು ಒಬ್ಬ ಉತ್ತಮ ಮನುಷ್ಯ ಮತ್ತು ಭಾರತದ ಪ್ರಜೆಯನ್ನಾಗಿ ರೂಪಿಸಲು ಸಾಧ್ಯವಾದರೆ ನನ್ನ ಉದ್ದೇಶ ಸಾಧನೆಯಾದ ತೃಪ್ತಿ ನನಗೆ ದೊರಕುತ್ತದೆ. ಮಕ್ಕಳಿಗೆ ಉಡುಗೊರೆಯಾಗಿ ನೀಡಲು ಪುಸ್ತಕ ಕೊಳ್ಳುವ ಪೋಷಕರಿಗೆ ಉತ್ತಮ ಹೂಡಿಕೆಯಾಗುತ್ತದೆ.” ಪುಸ್ತಕವನ್ನು ಮಕ್ಕಳಿಗೆ ಓದಲು ಕೊಟ್ಟು ದಯವಿಟ್ಟು ನೀವು ನಿರಾಸಕ್ತರಾಗಬೇಡಿ. ಕಥೆಗಳನ್ನು ಮಕ್ಕಳೊಡನೆ ನೀವೂ ಓದಿ ಆನಂದಿಸಿ. ಎಂಟು ವರ್ಷಕ್ಕಿಂತ ಚಿಕ್ಕ ಮಗುವಾದರೆ ನೀವೇ ಮಗುವಿಗೆ ನಾಟಕೀಯವಾಗಿ ಕಥೆಯನ್ನು ಹೇಳುತ್ತಾ ಖುಷಿಪಡಿ. ಹೀಗೆ ಮಾಡುವುದು ನಿಮ್ಮ ಮತ್ತು ಮಕ್ಕಳ ಸೌಹಾರ್ದಯುತ ಸಂಬಂಧಕ್ಕೆ ಅಡಿಗಲ್ಲಾಗುವುದರ ಜೊತೆಗೆ ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನೂ ಬೆಳೆಸುತ್ತದೆ.
ನಡಹಳ್ಳಿ ವಸಂತ್ ಅವರು 04 04 1958ರಂದು ಸೊರಬದಲ್ಲಿ ಜನಿಸಿದರು. ಬಿಬಿಎಮ್ ಹಾಗೂ ಆಪ್ತಸಮಾಲೋಚನೆ ಮತ್ತು ಮನೋಚಿಕಿತ್ಸವಿಷಯದಲ್ಲಿ ಎಂ. ಎಸ್ ಪೂರೈಸಿದರು. ವೃತ್ತಿಯಲ್ಲಿ ಮನೋಚಿಕಿತ್ಸೆ ಮತ್ತು ಆಪ್ತಸಮಾಲೋಚಕಿಯಾಗಿರುವ ಇವರು ದಾಂಪತ್ಯಚಿಕಿತ್ಸೆ ಮತ್ತು ಲೈಂಗಿಕ ಮನೋಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದವರು. ಕೃತಿಗಳು: ಏ ಬೀಳ್ತೀಯಾ ಹುಷಾರು! (ಪೋಷಕರ ಮಕ್ಕಳ ಸಂಬಂಧದ ಕುರಿತಾಗಿ, ಭೂಮಿ ಬುಕ್ಸ್ ಬೆಂಗಳೂರು), ನೀವು ನಿಜಕ್ಕೂ ಸುಖವಾಗಿದ್ದೀರಾ? (ವಿವಿಧ ಪತ್ರಿಕೆಗಳಲ್ಲಿ ಬರೆದ 39 ಲೇಖನಗಳ ಸಂಗ್ರಹ. ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.), ನಮ್ಮೊಳಗಿನ ಭಾವಪ್ರಪಂಚ (ನಮ್ಮ ಅಂತರಂಗದ ಜಗತ್ತಿನ ಸೂಕ್ಷ್ಮ ಪರಿಚಯ., ಕರ್ನಾಟಕ ಸಂಘ ಶಿವಮೊಗ್ಗ ಇವರ ...
READ MORE