ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಆರನೇ ಕಥಾ ಸಂಕಲನವಿದು. ಮೊದಲಿನ ಐದು ಸಂಕಲನಗಳು ಸಣ್ಣಕತೆಗಳಾದರೆ ಎರಡು ಕಾದಂಬರಿಗಳನ್ನೂ ಕಟ್ಪಾಡಿಯವರು ಪ್ರಕಟಿಸಿದ್ದರು. ಇದು ಮೂರು ನೀಳ್ಗತೆಗಳನ್ನು ಒಳಗೊಂಡ ಸಂಕಲನ. ಸಂಕಲನದ ಶೀರ್ಷಿಕೆಯನ್ನು ಹೊಂದಿರುವ ಒಂದು ಕತೆಯಿದೆ. ಹಾಗೆಯೇ ಅದರ ಜೊತೆಯಲ್ಲಿ ಇಂಬಳಗಳು ಮತ್ತು ಪಾಡು ಎಂಬ ಎರಡು ನೀಳ್ಗತೆಗಳಿವೆ. ಸಂಕಲನದ ಆರಂಭದಲ್ಲಿ ಕಟ್ಪಾಡಿಯವರು ನನ್ನ ಕತೆಗಳ ಹಿಂದೆ-ಮುಂದೆ ಎಂದು ಕೆಲವು ಟಿಪ್ಪಣಿಗಳನ್ನು ನೀಡಿದ್ದಾರೆ. ಈ ಬರಹವು ಕಟ್ಪಾಡಿಯವರ ಬರವಣಿಗೆಯ ಹಿಂದಿನ ಪ್ರೇರಣೆಯನ್ನು ವಿವರಿಸುವುದರ ಜೊತೆಗೆ ಸಂಕಲನಕ್ಕೆ ಪ್ರವೇಶಿಕೆಯಾಗಿ, ಮುನ್ನುಡಿಯಾಗಿಯೂ ಕೆಲಸ ಮಾಡಿದೆ. ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದಿಂದ ಬಂದ ಕಟ್ಪಾಡಿಯವರ ತಂದೆ ತೆಗೆದುಕೊಂಡ ನಿಲುವು ಹೇಗೆ ಫಕೀರ್ ಅವರ ಬರವಣಿಗೆ ಮೇಲೆ ಪ್ರಭಾವ ಬೀರಿತು ಎಂದು ಹೇಳಿದ್ದಾರೆ. ಸಂಕಲನದ ಆರಂಭದಲ್ಲಿ ‘ಇಲ್ಲಿನ ಕತೆಗಳೆಲ್ಲವೂ ಕಾಲ್ಪನಿಕ, ಬದುಕಿರುವ ಅಥವಾ ತೀರಿಕೊಂಡಿರುವ ಯಾರ ವೈಯಕ್ತಿಕ ಜೀವನಕ್ಕೂ ಸಂಬಂಧಿಸಿದ್ದಲ್ಲ’ ಎಂದು ಹೇಳಿದ್ದಾರೆ. ಇದು ಕತೆಗಳ ನೈಜತೆಗೆ ಹಿಡಿದ ಕನ್ನಡಿಯಾಗಿದೆ.
ತರವಾಡಿನ ವೈಭವದ ಪರಂಪರೆಯ ಅವನತಿ (ಕಡವು ಮನೆ), ಸೂಫಿ ಚಿಂತನೆ ಮತ್ತು ಬದುಕಿನ ಆಧ್ಯಾತ್ಮ ರಹಸ್ಯದ ಅನುಭವ (ಪಾಡು), ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪರಂಪರೆ, ಬದುಕು, ಚಿಂತನೆಗಳನ್ನು ಆವರಿಸಿದ ಕೋಮುವಾದಿ ರಾಜಕೀಯ ಮತ್ತು ಅದು ಸೃಷ್ಟಿಸಿದ ತಲ್ಲಣಗಳು (ಇಂಬಳಗಳು) ಈ ಕಥೆಗಳಲ್ಲಿ ರೂಪ ತಳೆದಿವೆ.
ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ...
READ MORE