ಕೆ. ನೀಲಾ ರವರು ಬರೆದ ಜ್ಯೋತಿಯೊಳಣ ಕಾಂತಿ ಕಥಸಂಕಲನವು ಮಹಿಳಾ ಪರವಾದ ನಿಲುವನ್ನು ಹೊಂದಿದೆ. ನೀಲಾ ಅವರ ಕಥೆಗಳಲ್ಲಿ ಪ್ರಮುಖವಾಗಿ ಹೆಣ್ಣಿನ ಶೋಷಣೆಯ ಬದುಕನ್ನು ಹಾಗೂ ಅವಳಿಗೆ ಎದುರಾಗುವ ಸಾಮಾಜಿಕ ಸಮಸ್ಯೆಗಳನ್ನು ಮತ್ತು ಕೌಟುಂಬಿಕ ಸಮಸ್ಯೆಗಳ ಎಳೆಯನ್ನು ತಿಳಿಸುತ್ತದೆ.
ಎಲ್ಲಾ ಕಾಲದಲ್ಲಿ ಮತ್ತು ಎಲ್ಲಾ ವಲಯಗಳಲ್ಲಿಯೂ ಎಷ್ಟು ಸೂಕ್ಷ್ಮವಾಗಿ ಮತ್ತುಅಮಾನವೀಯವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನೆಡಯುತ್ತವೆ ಎಂಬುವುದನ್ನುಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆ ನಿರ್ಮಿಸಿದ ಜಾತಿ, ಕೋಮು, ಆಧಾರಿತ ಸಮಾಜದಲ್ಲಿ ಉಂಟಾಗಿರುವ ಅಮಾನವೀಯ ಸಂಬಂಧಗಳನ್ನು ನೀಲಾ ಅವರ ಕಥೆಗಳು ಹಿಡಿದಿಡುತ್ತವೆ.
ಹೆಣ್ಣಿನ ಶೋಷಣೆಯು ಬದುಕಿನ ಎಲ್ಲ ಸ್ತರಗಳಲ್ಲಿಯೂ, ಎಲ್ಲ ಕಾಲಮಾನದಲ್ಲೂ ಮತ್ತು ಎಲ್ಲಾ ವಲಯಗಳಲ್ಲೂ ಎಷ್ಟು ಸೂಕ್ಷ್ಮವಾಗಿ ಅಮಾನವೀಯವಾಗಿ ನಡೆಯುತ್ತದೆ ಎನ್ನುವುದು ಈ ಕತೆಗಳ ಉಜ್ವಲ ಗುಣ.
ಕರ್ನಾಟಕದ ಪ್ರಮುಖ ಹೋರಾಟಗಾರ್ತಿ ಕೆ. ನೀಲಾ ಅವರು ಕನ್ನಡದ ಕಥೆಗಾರರಲ್ಲಿ ಒಬ್ಬರು. ನೀಲಾ ಅವರು 1966ರ ಆಗಸ್ಟ್ 1 ರಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಓದು, ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಇವರ ಕತೆ, ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತೊಗರಿ ಬೆಳೆಗೆ ಬೆಂಬಲ ಬೆಲೆ ಸಿಗಬೇಕೆಂದು ರೈತಪರ ಹೋರಾಟದಲ್ಲಿ ಜೈಲು ಸೇರಿದಾಗ ಬರೆದ ಬದುಕು ಬಂದೀಖಾನೆ ಕೃತಿಯು ಜೈಲಿನ ಕಥನ ಒಳಗೊಂಡಿದೆ. ಮಹಿಳೆ- ಸಮಸ್ಯೆ ಸವಾಲುಗಳು ಪ್ರಚಾರೋಪನ್ಯಾಸ ಮಾಲೆಯ ಕಿರು ಹೊತ್ತಿಗೆ, ಜ್ಯೋತಿಯೊಳಗಣ ಕಾಂತಿ, ತಿಪ್ಪೆಯನರಸಿ ಮತ್ತು ಇತರ ಕತೆಗಳು ಎಂಬ ...
READ MORE