ಲೇಖಕ ಮಿರ್ಜಾ ಬಷೀರ್ ಅವರ ಕಥಾಸಂಕಲನ ‘ಜಿನ್ನ’. ಈ ಕಥಾಸಂಕಲನಕ್ಕೆ ಜಿ.ವಿ. ಆನಂದ ಮೂರ್ತಿ ಅವರು ಮುನ್ನುಡಿ ಬರೆದಿದ್ದಾರೆ. ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರೆದಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಜಿನ್ನಿ, ಒಂದು ಪ್ಲಾಸ್ಟಿಕ್ ಕವರ್, ದಾಳಿ, ಅಮೀನಾ ಅಬ್ದುಲ್ಲ, ಹೆಜ್ಜೆ, ಪಯಣ, ಉಮ್ಮು ಮತ್ತು ಮಸೀದಿ, ಅವರು ಹೇಳಿದ್ದೆಲ್ಲ ಸುಳ್ಳಿರಲಿ, ಸ್ವಾತಂತ್ಯ್ರದ ಲಾಡು ಉಂಡೆಗಳು,ಹುಣಸೇಮರದ ದೆವ್ವ, ಗುಬ್ಬಚ್ಚಿ ದಾಟಿಸಿದ ದಾರ ಸೇರಿ 11 ಶೀರ್ಷಿಕೆಗಳಿವೆ.
ಲೇಖಕ ಡಾ. ಮಿರ್ಜಾ ಬಷೀರ್ ಅವರು ತುಮಕೂರು ನಿವಾಸಿ. ‘ಬಟ್ಟೆಯಿಲ್ಲದ ಊರಿನಲ್ಲಿ’, ‘ಜಿನ್ನಿ’, ‘ಹಾರುವ ಹಕ್ಕಿ ಮತ್ತು ಇರುವೆ’ ಪ್ರಕಟಿತ ಕತಾಸಂಕಲನಗಳು. ಅನೇಕ ಕತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೂರು ಬಾರಿ ಪ್ರಜಾವಾಣಿ ದೀಪಾವಳಿ ಕತಾ ಸ್ಪರ್ಧೆ ಹಾಗೂ ಒಂದು ಬಾರಿ ಕನ್ನಡಪ್ರಭ ಸಂಕ್ರಾಂತಿ ಕತಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಇವರ ಕೆಲವು ಕತೆಗಳು ಪದವಿ ತರಗತಿಗಳ ಪಠ್ಯಗಳಾಗಿವೆ. ಒಂದು ಕತೆಯು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ 9ನೇ ತರಗತಿಯ ಭಾಷಾ ಅಲ್ಪಸಂಖ್ಯಾತ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ನಾಟಕ ‘ತಬ್ಬಲಿಗಳು’ ಕೃಷಿ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ...
READ MORE