ಲೇಖಕ ಗಿರಿಮನೆ ಶ್ಯಾಮರಾವ್ ಅವರ ಕೃತಿ-ಜೇನುಕಲ್ಲಿನ ರಹಸ್ಯ ಕಣಿವೆ. ಮಲೆನಾಡು ಕಾಡಿನ ರೋಚಕ ಕತೆಗಳ ಭಾಗ-4 ರ ಕೃತಿ. ಮಲೆನಾಡಿನ ಪ್ರಮುಖ ಭಾಗವೂ ಆದ ಜೇನುಕಲ್ಲು ಪ್ರದೇಶವು ಮಹತ್ವದ ಸಸ್ಯಗಳಿಂದ, ಗಿಡ-ಮರಗಳಿಂದ ಸಮೃದ್ಧ. ಈ ಕಣಿವೆಯ ಮಹತ್ವವನ್ನು ತಿಳಿಸುವ ಕೃತಿ.
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...
READ MORE