ಜಾತಿ ಕುಲುಮ್ಯಾಗ ಅರಳಿದ ಪ್ರೀತಿ

Author : ತಿರುಪತಿ ಭಂಗಿ

Pages 120

₹ 100.00




Year of Publication: 2014
Published by: ಗೌರಿ ಪ್ರಕಾಶನ
Address: ಬಾಗಲಕೋಟೆ-587204
Phone: 8197116467

Synopsys

ಲೇಖಕ ತಿರುಪತಿ ಭಂಗಿಯವರ ’ ಜಾತಿ ಕುಲುಮ್ಯಾಗ ಅರಳಿದ ಪ್ರೀತಿ ’ ಕಥಾ ಸಂಕಲನವು 

ಲೇಖಕರ ಗ್ರಾಮೀಣ ಅನುಭವಗಳನ್ನೇ ಹೆಚ್ಚು ಒಳಗೊಂಡಿದೆ. ತಳ ಸಮುದಾಯದ ಜನರು ರಾಜಕರಣಿಗಳ ಕೆಟ್ಟ  ರಾಜಕಾರಣಕ್ಕೆ  ಹೇಗೆ ಬಲಿಯಾಗುತ್ತಾರೆ, ತಳಸಮುದಾಯವನ್ನು ಹೇಗೆ ರಾಜಕೀಯ ಬಲಿಪಶು ಮಾಡಲಾಗುತ್ತದೆ, ಕೆಳ ಜಾತಿಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವ ಮಡಿವಂತ ಮಾಸ್ತರ, ಅಂತರ್ಜಾತಿ ಪ್ರೇಮಿಗಳು ಪಟ್ಟ ಕಷ್ಟ, ಯಾರದೋ ಮೈಯಲ್ಲಿ ದೈವ್ವ ಬರೋದು, ಜಮೀನ್ದಾರರ ಶೋಷಣೆ, ಹೀಗೆ ಹಲವು ಪ್ರಮುಖ  ಕಥೆಗಳು ಇಲ್ಲಿ ಕಂಡುಬರುತ್ತದೆ.  

About the Author

ತಿರುಪತಿ ಭಂಗಿ

ಕತೆಗಾರ ತಿರುಪತಿ ಭಂಗಿ ಅವರು ಬಾಗಲಕೋಟೆ ಸಮೀಪದ ದೇವನಾಳ ಎಂಬ ಹಳ್ಳಿಯಲ್ಲಿ 1984 ರಲ್ಲಿ ಜನಿಸಿದರು. ತಂದೆ ಮಲ್ಲಪ್ಪ ತಾಯಿ ಗೌರವ್ವ. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡರು. ಹೈಸ್ಕೂಲ್ ಶಿಕ್ಷಣ ಮಾಡುತ್ತಿರುವಾಗಲೇ ಅಜ್ಜ-ಅಜ್ಜಿಯರೂ ತೀರಿಕೊಂಡರು. ಸಾಹಿತ್ಯ ರಚನೆಗೆ ಇವರ ಬಡತನ, ಹಸಿವು, ಅವಮಾನಗಳೇ ಮೂಲ ದ್ರವ್ಯ. . ಬಾಗಲಕೋಟೆಯ ಬಸವೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಹೃದಯರಾಗ, ಅವ್ವ, ಕವಳೆಗಣ್ಣಿನ ಹುಡುಗಿ, ಮನಸು ಕೊಟ್ಟವಳು, ಅಪ್ಪ’ ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಮೊದಲ ಕಾದಂಬರಿ ‘ಫೋಬಿಯಾ' 2017ರಲ್ಲಿ ಪ್ರಕಟಣೆ ಕಂಡಿತು. ಅವರ ‘ಜಾತಿ ಕುಲುಮ್ರಾಗ ಅರಳಿದ ಪ್ರೀತಿ’ ಚೊಚ್ಚಲ ಕೃತಿ ...

READ MORE

Related Books