ಇನ್ನೊಂದು ಸಂತೆ

Author : ಶ್ರೀನಿವಾಸ ವೈದ್ಯ

Pages 110

₹ 100.00




Year of Publication: 2017

Synopsys

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಶ್ರೀನಿವಾಸ ವೈದ್ಯರು ಸಹಜ ಕಥೆಗಾರರು. ಅವರೇನು ಬರೆದರೂ ಅದಕ್ಕೊಂದು ಕಥನದ ಆಕಾರವೂ ಆಂತರ್ಯವೂ ಇರುತ್ತದೆ. ಅಷ್ಟೇ ಅಲ್ಲ, ಅವರ ಜೊತೆ ಹತ್ತು ನಿಮಿಷ ಹರಟೆ ಹೊಡೆದರೂ ಸಾಕು ಅವರ ಮಾತಿಗೂ ಈ ಗುಣವಿರುವುದು ಗೊತ್ತಾಗುತ್ತದೆ.

ಧಾರವಾಡದ ಅವರ ಹಳೆಯ ದಿನಗಳಿರಬಹುದು ಅಥವಾ ಇಂದಿನ ಬೆಳಗಿನ ವಾಕ್ ಇರಬಹುದು – ಅದನ್ನು ಹೇಳುವ ಕ್ರಮದಲ್ಲಿ, ಅವರಿಗೇ ವಿಶಿಷ್ಟವಾದ ನವಿರಾದ ಹಾಸ್ಯದಿಂದ ಸನ್ನಿವೇಶವನ್ನು ಗ್ರಹಿಸುವಲ್ಲಿ ಅವರ ಕಥನದ ಪ್ರತಿಭೆಯಿದೆ. ಅವರಿಗಿರುವ ಈ ಶಕ್ತಿಯಿಂದಾಗಿಯೇ ‘ಶ್ರದ್ಧಾ’ದಂತಹ ಅವರ ಪ್ರಬಂಧಗಳಿಗೆ ದಟ್ಟ ವಿವರಗಳನ್ನೊಳಗೊಂಡ ಕಥೆಯ ಮೈಕಟ್ಟು ಮಾತ್ರವಲ್ಲ ಅಷ್ಟೇ ಬಲವಾದ ಅನುರಣನ ಶಕ್ತಿಯೂ ಇದೆ. ಎಲ್ಲ ಅತ್ಯುತ್ತಮ ಸಾಹಿತ್ಯದಲ್ಲಿರುವಂತೆ ಬದುಕಿನ ಒಲವು ನಲಿವು ದುಃಖ ಸುಖಗಳು ವೈದ್ಯರ ಬರವಣಿಗೆಯಲ್ಲಿ ಒಟ್ಟಿಗೇ ಇರುತ್ತವೆ. ಪ್ರಸ್ತುತ ಪುಸ್ತಕ ‘ಇನ್ನೊಂದು ಸಂತೆ’ಯು ಅವರ ಸೃಜನಶೀಲ ಪ್ರತಿಭೆಗೆ ಇನ್ನೊಂದು ಉದಾಹರಣೆ.

2017ರಲ್ಲಿ ಕೃತಿಯು 2ನೇ ಮುದ್ರಣವನ್ನು ಕಂಡಿದೆ.

About the Author

ಶ್ರೀನಿವಾಸ ವೈದ್ಯ
(04 April 1936 - 21 April 2023)

ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧ ಮುಂತಾದ ಪ್ರಕಾರಗಳಿಂದ ಒಮ್ಮೆಲೆ ಗಂಭೀರ ಸಾಹಿತ್ಯದೆಡೆಗೆ ಜೀಕಿಕೊಂಡ ಶ್ರೀನಿವಾಸ ವೈದ್ಯರು ಹುಟ್ಟಿದ್ದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ. ತಂದೆ ಬಿ.ಜಿ. ವೈದ್ಯ, ಸುಪ್ರಸಿದ್ಧ ವಕೀಲರು. ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ಸುಂದರಾಬಾಯಿ. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಎಂ.ಎ.ವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣ ಗೊಳಿಸಿದರು. 1959ರಲ್ಲಿ ಅರ್ಥಶಾಸ್ತ್ರ-ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಅವರು ಬ್ಯಾಂಕಿಂಗ್ ಪರೀಕ್ಷೆಯಾದ ಸಿ.ಎ.ಐ.ಐ.ಬಿ ಮತ್ತು ಭಾರತೀಯ ವಿದ್ಯಾಭವನದಿಂದ ಪಡೆದ ಪತ್ರಿಕೋದ್ಯಮ ಡಿಪ್ಲೊಮಾವನ್ನು ಪೂರೈಸಿದರು. ಮನೆಯಲ್ಲಿದ್ದುದು ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣ. ಬಿಡುವಿನ ವೇಳೆಯಲ್ಲೆಲ್ಲಾ ಕೈಯಲ್ಲೊಂದು ಕಾದಂಬರಿ ಹಿಡಿದು ...

READ MORE

Related Books