‘ಇನ್ನೊಂದು ಗ್ರಹ’ ಲೇಖಕ ಹರಿಯಪ್ಪ ಪೇಜಾವರ ಅವರ ಕಥಾಸಂಕಲನ. ಹೊಸಬಗೆಯ ಕಥೆಗಾರಿಕೆಯ ಮೂಲಕ, ಹೊಸ ಸಂವೇದನೆಗಳ ಮೂಲಕ ಗಮನಸೆಳೆಯುತ್ತದೆ. ಅತ್ಯಂತ ಸೂಕ್ಷ್ಮವಾದ ವ್ಯಕ್ತಿಯ ಸಂವೇದನೆ ಹೊರಪ್ರಪಂಚದ ಜತೆಗೆ ನಿರಂತರ ಸಂವಾದ ನಡೆಸುತ್ತಾ ತನಗೆ ಬೇಕಾದ ಹಾಗೆ ಬದುಕುವುದು ಇವೆರಡರ ನಡುವೆ ಒಂದು ಸಮತೋಲನವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾ ಇರುವ ಹೊಸ ಸಂವೇದನೆ ಈ ಕತೆಗಳದು ಎನ್ನುತ್ತಾರೆ ಲೇಖಕ ಡಾ.ಬಿ. ಜನಾರ್ದನ ಭಟ್. ಕಾಫ್ಕಾನ ಹಾಗೆ ಆಕರ್ಷಕ ನಿರೂಪಣೆಯಿರುವ ಈ ಕತೆಗಳು ಅವನಂತೆ ಸರ್ರಿಯಲಿಸ್ಟಿಕ್ ಆಗಿರದೆ ವಾಸ್ತವವಾದಿ ನೆಲೆಗಟ್ಟಿನಲ್ಲಿವೆ. ಹಾಗಾಗಿ ಓದುಗರಿಗೆ ಆಕರ್ಷಕ ಮಾತ್ರವಲ್ಲ ಆಪ್ತವೂ ಆಗುತ್ತವೆ. ಈ ಪುಸ್ತಕದಲ್ಲಿ ವಿಚಾರಣೆ, ಇನ್ನೊಂದು ಗ್ರಹ, ಬೂತ, ವಿದಾಯ, ಬಾಹುಬಲಿ, ಪ್ರತೀಕ, ಹೆಸರು, ಬಾಕಿ, ತನ್ನಲ್ಲೇ ಮಾತಾಡುವ ವ್ಯಕ್ತಿಯ ಕಥೆ, ಒಂದು ಕನಸು, ಮತ್ತು ಒಂದು ಗುಮಾಸ್ತನ ಸಾವು ಎಂಬ ಹನ್ನೊಂದು ಕಥೆಗಳು ಸಂಕಲನಗೊಂಡಿವೆ.
ಲೇಖಕ ಹರಿಯಪ್ಪ ಪೇಜಾವರ ಮೂಲತಃ ಮಂಗಳೂರಿನ ಬಜ್ಪೆ ಸಮೀಪದ ಪೇಜಾವರದವರು. ಪೇಜಾವರ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ, ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ಬಿ.ಕಾಂ. ಪದವಿ, ಮಂಗಳಗಂಗೋತ್ರಿಯಲ್ಲಿ ಎಂ.ಎ ಹಾಗೂ 1989ರಿಂದ ಮಂಗಳೂರಿನ ಶ್ರೀಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದಾರೆ. ಕೃತಿಗಳು: ಕವನಸಂಕಲನಗಳು- ವ್ಯಕ್ತಿ ಮತ್ತು ವ್ಯಕ್ತ(1986), ನೆನದದ್ದು ಹೆಚ್ಚಾಗಿ(2001), ಕಲಾವಿದನ ಕೊಲೆ(2012) , ಕಥಾಸಂಕಲನ: ಮಾನ ಮತ್ತು ಇತರ ಕಥೆಗಳು(1996), ಇನ್ನೊಂದು ಗ್ರಹ (2015) ಹಾಗೂ ಲೇಖನ ಸಂಗ್ರಹ- ಯಾರ ಮುಲಾಜೂ ಇಲ್ಲದೆ(2016). ಪ್ರಶಸ್ತಿ ಗೌರವ: ಇವರ ವ್ಯಕ್ತಿ ಮತ್ತು ವ್ಯಕ್ತ ಸಂಕಲನಕ್ಕಾಗಿ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಮಾನ ಮತ್ತು ಇತರ ಕಥೆಗಳಿಗೆ ವರ್ಧಮಾನ ...
READ MORE