ಇಹದ ಪರಿಮಳ

Author : ಕಂನಾಡಿಗಾ ನಾರಾಯಣ

Pages 120

₹ 100.00

Buy Now


Year of Publication: 2017
Published by: ನವಕರ್ನಾಟಕ ಪ್ರಕಾಶನ
Address: 15 ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, , ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001

Synopsys

ಈ ಸಂಕಲನದಲ್ಲಿ ಒಟ್ಟು 13 ಕತೆಗಳು ಇವೆ. ತನ್ನ ಸುತ್ತಮುತ್ತಲಿನ ಕೃತಕ ಬಂಧಗಳನ್ನು ಮೀರಿ ಮಣ್ಣಿನ ಪರಿಮಳಕ್ಕೆ ಸೋಲುವ ನಾಯಕನ ಕತೆಯನ್ನು ಇಹದ ಪರಿಮಳ ಹೇಳುತ್ತದೆ. ಆ ಪರಿಮಳವನ್ನು ದೂರದಿಂದ ಆಸ್ವಾದಿಸುವುದೇನೋ ಚೆನ್ನಾಗಿಯೇ ಇರುತ್ತದೆ. ಆದರೆ ಆ ಪರಿಮಳಕ್ಕಾಗಿ ತರಬೇಕಾದ ಭೌತಿಕ ಬದುಕನ್ನು ಮೀರುವುದು ಕಷ್ಟ. ಇದು ಕಥಾನಾಯಕ ಅಮೋಘವರ್ಷನ ಒಳಗಿನ ಸಂಘರ್ಷ. ಒಬ್ಬ ನಟ ಬದುಕಿನ ಮೌಲ್ಯಗಳನ್ನು ಅದ್ಭುತವಾಗಿ ನಟಿಸಬಲ್ಲ. ಆದರೆ ಅದನ್ನು ತನ್ನ ಬದುಕಾಗಿಸುವ ಸಂದರ್ಭದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ 'ಗಂಧದ ಬಾಗಿಲು' ಇನ್ನೊಂದು ರೀತಿಯಲ್ಲಿ ಮನುಷ್ಯನೊಳಗಿನ ಒಳ ಹೊರಗಿನ ವಾಸನೆಯನ್ನು ತಿಳಿಸುತ್ತದೆ. ಒಂದು ದ್ವೇಷ, ಅಸೂಯೆಯಿಂದ ಕರಟಿದ ಪರಿಮಳ. ಇದೇ ಸಂದರ್ಭದಲ್ಲಿ ಅದರ ಬಾಗಿಲು ಮಾತ್ರ ಗಂಧದ ಪರಿಮಳ ಸೂಸುತ್ತದೆ. ಹೀಗೆ ಭಂಗಿಗಿರಿ, ಮಳೆ ಬೇರೆ ಬೇರೆ ರೀತಿಯಲ್ಲಿ ಇಹದ ವಾಸನೆಗಳ ವೈವಿಧ್ಯಗಳ ಸುತ್ತ ಸುತ್ತುತ್ತವೆ. ಉಳಿದಂತೆ ಕತೆಗಳು ಮನುಷ್ಯನೊಳಗಿನ ನೀಚತನ ಮತ್ತು ಒಳ್ಳೆಯತನಗಳ ತಿಕ್ಕಾಟಗಳನ್ನು ಹೇಳುತ್ತವೆ. ಕಂನಾಡಿಗಾ ಅವರ ಕತೆ ಹೇಳುವ ರೀತಿ, ಪರಿಮಳ ವನ್ನು ಪರಿಣಾಮಕಾರಿಯಾಗಿ ಹಿಡಿದಿಡುತ್ತದೆ.

About the Author

ಕಂನಾಡಿಗಾ ನಾರಾಯಣ

ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...

READ MORE

Reviews

ಕಥೆಗಳೆಂದರೆ  ಇವು ಅಜ್ಜಿಕಥೆಗಳೂ ಅಲ್ಲ: ಕಟ್ಟು ಕಥೆಗಳೂ ಅಲ್ಲ. ಇಂದಿನ ಕಾಲದ ವಿದ್ಯಮಾನಗಳನ್ನು ತಿಳಿಸುವ ಹಸಿ ಬಿಸಿ ಘಟನಾವಳಿಗಳು. ನಾವೆಲ್ಲ ಹೇಗೆ ಬದುಕುತ್ತಿದ್ದೇವೆಂದು ನಮ್ಮನ್ನು ನಮಗೆ ಪರಿಚಯಿಸುವ ನಿಜದ ದನಿಗಳು. ಸತ್ಯ ಆಳದಲ್ಲಿದ್ದು ಬಗೆದು ನೋಡದಿದ್ದಲ್ಲಿ ಅದರ ಮೇಲೆ ಸುಳ್ಳು ವಿಜೃಂಭಿಸುತ್ತದೆ. ಮೇಲ್ನೋಟಕ್ಕೆ ಸಹಜವೆಂಬಂತಿದ್ದರೂ ಲೆಕ್ಕವಿಲ್ಲದಷ್ಟು ಒಳಸುಳಿಗಳು ಅಲ್ಲಿರುತ್ತವೆ. ಇಂಥ ಸುಳ್ಳುಗಳನ್ನೇ ಸತ್ಯವೆಂದು ನಂಬಿ ನಾವಿಂದು ಮೋಸ ಹೋಗುತ್ತಿದ್ದೇವೆ. ನಮ್ಮ ದೇಶದಲ್ಲಿನ ಎಲೆಕ್ಷನ್, ನ್ಯಾಯದಾನ ವ್ಯವಸ್ಥೆ, ಆರೋಗ್ಯ ಸಮಸ್ಯೆ, ಔಷಧ ಪದ್ಧತಿಯ ಮೇಲಾಟ, ರಾಜಕೀಯ ಜೀವನ, ಅತ್ಯಂತ ಪ್ರತಿಭಾವಂತನೊಬ್ಬನ ವೈಯಕ್ತಿಕ ಒಳಬೇಗುದಿ, ನಾಗಾಲೋಟದ ಬದುಕಿನಲ್ಲಿ ಕಳೆದುಕೊಂಡ ನೆಮ್ಮದಿ – ಇವೆಲ್ಲ ಇಲ್ಲಿ ಕಥಾರೂಪದಲ್ಲಿ ಹೊರಹೊಮ್ಮಿ ನಾವಿರುವ ಸ್ಥಿತಿಯನ್ನು ಮನಗಾಣಿಸಿವೆ. ಎಲ್ಲರ ಮುಗ್ಧತೆಯೇ ಇಲ್ಲಿನ ಬಲವಾದ ವೀಕ್‌ನೆಸ್‌, ಸಹಜವಾಗಿ ಸರಿದಾರಿಯಲ್ಲಿ ಹರಿವ ನದಿಯೊಂದನ್ನು ನಮ್ಮಿಷ್ಟದಂತೆ ಹೊರಳಿಸಿ, ದಾರಿ ತಪ್ಪಿಸಿ ಅಸಹಜತೆಯೇ ಸಹಜವೆಂಬಂತೆ ಬಿಂಬಿಸುವ ಇಂದಿನ ಮೀಡಿಯಾ ತಂತ್ರಗಳಿಗೆ ನಾವು ಮಾರುಹೋಗುತ್ತಿದ್ದೇವೆ. ಸ್ವಲ್ಪ ಯೋಚಿಸಿದರೆ ನಾವೆಲ್ಲಿ ಎಡವಿದ್ದೇವೆಂದು ತಿಳಿದೀತು. ನಮ್ಮನ್ನು ನಾವು ಕಂಡುಕೊಳ್ಳಲು ಇಲ್ಲಿನ ಕಥೆಗಳು ಸಹಾಯ ಮಾಡುತ್ತವೆ. ಕಂನಾಡಿಗಾರವರ ನವಿರಾದ ಲಘು ಹಾಸ್ಯ - ವಿನೋದದ ಶೈಲಿಯಿಂದಾಗಿ ಆಕರ್ಷಣೀಯವಾಗಿದೆ.

ಕೃಪೆ: ಹೊಸತು 2018 (ಜನೆವರಿ)

Related Books