‘ಹೊಳೆ ಬದಿಯ ಬೆಳಗು’ ಕೃತಿಯು ಲೇಖಕ ಕೇಶವ ಮಳಗಿ ಅವರ ಕತಾಸಂಕಲನ. ಕೃತಿಯ ಬೆನ್ನುಡಿಯಲ್ಲಿ ಸಂಕಲನದಲ್ಲಿರುವ ಕೆಲವೊಂದು ವಿಚಾರಗಳು ಹೀಗೆ ಪ್ರಸ್ತುತಗೊಂಡಿದೆ. ಚಂದ್ರವ್ವ ನಿಂತಲ್ಲಿಯೇ ತನ್ನ ಪಾದಗಳನ್ನು ಇನ್ನಷ್ಟು ಒತ್ತಿದಳು: ಅವು ನೆಲದಾಳಕ್ಕೆ ಬೇರು ಬಿಟ್ಟ ಬಳ್ಳಿಯಂತೆ ಬಳುಕಿದವು. ಕಲ್ಲುಬಂಡೆಯ ನಡುವೆ ಚಿಗುರುವ ವಿಸ್ಮಯದ ಹೂವಿನ ಕುಡಿಯಂತೆ ಬೆಳೆಯುತ್ತಿದ್ದೇನೆ ಎನ್ನುವ ಭಾವ ಮೈತುಂಬಿ ಅವಳನ್ನು ಬೆಚ್ಚಗಾಗಿಸಿತು. ಆಕೆ ಗೋಣನ್ನು ಇನ್ನಷ್ಟು ಎತ್ತರಿಸಿದಳು. ಆ ಕ್ಷಣದಲ್ಲಿ ಅವಳು ಅನುಭವಿಸುತ್ತಿದ್ದ ಸುಖಕ್ಕೆ ಕೊರಳು ಟಿಸಿಲೊಡೆದು ಆಕಾಶಕ್ಕೆ ಹಬ್ಬುತ್ತ ಹೋಯಿತು. ರಥೋತ್ಸವಕ್ಕೆ ದಿವ್ಯತೆಯನ್ನು ತರಲೆಂದು ಮಾತ್ರ ಶೇರಿಗೆ ಹೂವಿನ ಮಳೆ ಸುರಿಸಲು ಒಟ್ಟುಗೂಡಿದ್ದ ಮೋಡಗಳು ಆಕೆಯ ಮುಖ ಸವರಿ, ಉದಕ ಚುಮುಕಿಸಿ ಅವಳನ್ನು ಮುಕ್ತಳನ್ನಾಗಿಸಿದವು. ತೀರ ಜನಸಾಮಾನ್ಯರು ಅಂದುಕೊಳ್ಳುವುದರಲ್ಲಿ ಅಡಗಿರುವ ಅಪಾರ ಮಾನವೀಯ ಧಾರಣಾಶಕ್ತಿ, ಬದುಕನ್ನು ಎಲ್ಲ ಘನತೆಯೊಂದಿಗೆ ಎದುರಿಸುವ ಆ ಸಾಮಾನ್ಯರ ಛಲವಂತಿಕೆಗಳು ಈ ಸಂಕಲನದ ಕಥೆಗಳಲ್ಲಿ ವಿಸ್ಮಯದಂತೆ ಅಡಗಿವೆ.
ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...
READ MORE