ಲೇಖಕ ರಮೇಶಬಾಬು ಯಾಳಗಿ ಅವರ ಕಥಾಸಂಕಲನ ‘ಹಿಮದೊಳಗಿನ ಬೆಂಕಿ’. ಈ ಕೃತಿಗೆ ಮಹಾಂತೇಶ ನವಲಕಲ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ರಮೇಶಬಾಬು ಯಾಳಗಿಯವರ ಕಥೆಗಳು ದೊಡ್ಡ ಸಂಘರ್ಷವನ್ನು ಸೃಷ್ಠಿ ಮಾಡಿ ಓದುಗರನ್ನು ತಬ್ಬಿಬ್ಬು ಮಾಡುವುದಿಲ್ಲ ಇದು ಅವರ ಬರವಣಿಗೆಯ ಶಕ್ತಿ. ಅವರ ಕಥೆಗಳು ಹಿಮದೊಳಗೆ ಬೆರೆತ ಬೆಂಕಿಯಂತೆ. ತಣ್ಣಗೆ ನಮ್ಮ ಕಣ್ಣೆದುರಿಗೆ ನಿಲ್ಲುತ್ತವೆ. ಇಲ್ಲಿ ಹಿಮ ಮತ್ತು ಬೆಂಕಿ ಬೇರೆಯಾಗಿ ನಿಲ್ಲುವುದಿಲ್ಲ. ಎರಡು ಸಮಾವಿಷ್ಠಗೊಂಡು ನಮ್ಮ ಮುಂದೆ ನಿಲ್ಲುತ್ತವೆ ಎಂದಿದ್ದಾರೆ ಹಿರಿಯ ಕತೆಗಾರ ಮಹಾಂತೇಶ ನವಲಕಲ್. ಹಾಗೇ ಯಾಳಗಿ ಅವರದು ತಾಯಿ ಪ್ರೀತಿಯ ಮನಸ್ಸು, ಅವರ ತಾಯಿಯನ್ನು ಅವರು ಜಗದ ಎಲ್ಲ ಪ್ರೀತಿಯ ಸಂಕೇತಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ ಎಂದು ಕೇಳಿದ್ದೇನೆ. ಅದು ಅವರ ಕತೆಗಳ ಒಡಲಿನಲಿ ಅಂತರ್ಗತವಾಗಿ ಹರಿದಾಡಿದೆ ಎಂದಿದ್ದಾರೆ. ಜೊತೆಗೆ ಯಾಳಗಿ ಅವರ ಕೆಲ ಕತೆಗಳ ಕ್ಯಾನುವಾಸುಗಳು ಕಾದಂಬರಿಯಂತೆ ಬಹುವಿಸ್ತಾರ. ಮುಂದಿನ ದಿನಮಾನಗಳಲ್ಲಿ ಕಾದಂಬರಿಯನ್ನು ರಮೇಶಬಾಬು ಯಾಳಗಿ ಅವರಿಂದ ನಿರೀಕ್ಷಿಸುತ್ತೇನೆ ಎಂದು ಬರವಸೆಯ ಮಾತುಗಳನ್ನಾಡಿದ್ದಾರೆ.
ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...
READ MORE