ಕೆ. ಸತ್ಯನಾರಾಯಣ ಸಮಕಾಲೀನ ಸಾಮೂಹಿಕ ವಾಸ್ತವಗಳ ಶೋಧನೆಯನ್ನು ಬದುಕಿನ ವೈರುಧ್ಯಗಳು ಹಾಗೂ ಜಟಿಲತೆಗಳನ್ನು ಗ್ರಹಿಸಿಕೊಂಡು ಗಟ್ಟಿಯಾದ ಹಾಗೂ ಸಮೃದ್ಧವಾದ ಕಥಾ ವಿವರಗಳ ಮೂಲಕ ವಿಭಿನ್ನ ಕೋನಗಳಿಂದ ಮಾಡಬಲ್ಲವರು. ಸತ್ಯನಾರಾಯಣರ ಅನುಭವಲೋಕ ದೊಡ್ಡದು ಮತ್ತು ವಿಭಿನ್ನವಾದುದು. ಅವರ ಕತೆಗಳು ನಮ್ಮ ಇವತ್ತಿನ ಬದುಕಿನ ಅನೇಕ ಮಗ್ಗುಲುಗಳ, ನೆಲೆಗಳ ಅನ್ವೇಷಣೆಗೆ ತೊಡಗಿಕೊಳ್ಳುತ್ತವೆ. ಸಮಷ್ಠಿಹಿತ ಸಹಬಾಳ್ವೆಗಾಗಿ ಅವು ಸದಾ ತುಡಿಯುವಂತಹವು.
ನವ್ಯೋತ್ತರ ಕಥಾಪ್ರಪಂಚವನ್ನು ತಮ್ಮ ಸಮೃದ್ಧ ಕಥನದಿಂದ ಶ್ರೀಮಂತಗೊಳಿಸುತ್ತಿರುವ ಸತ್ಯನಾರಾಯಣ ನಮ್ಮ ಕಾಲದ ಒಬ್ಬ ಪ್ರಮುಕ ಕತೆಗಾರರು. ವಿಭಿನ್ನ ಓದು ಪರಿಶೀಲನೆಗಳನ್ನು ಬೇಡುವಂಥ ಹಲವು ಶಕ್ತ ಕಥೆಗಳು ಈ ಸಂಕಲನದಲ್ಲಿವೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE