ಲೇಖಕ ಕಿಗ್ಗಾಲು. ಎಸ್. ಗಿರೀಶ್ ಅವರ ಎರಡನೆಯ ಕೃತಿ ಹವಲ್ದಾರ್ ನಂಜಪ್ಪ ಮತ್ತಿತರ ಕಥೆಗಳು. ತುಷಾರ ಮಾಸಪತ್ರಿಕೆ ಹಾಗೂ ಸ್ಥಳೀಯ ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಅವರು ಬರೆದ ಕಥೆಗಳ ಸಂಕಲನವಿದು.ದಿನನಿತ್ಯ ಬದುಕಿನಲ್ಲಿ ಕಾಣುವ ಘಟನೆಗಳಿಗೆ ಅಕ್ಷರವನ್ನು ನೀಡಲಾಗಿದೆ. ಹೆಚ್ಚಿನ ಕಥೆಗಳು ಸ್ಫರ್ಧಾಕಣದಲ್ಲಿ ಇಳಿದು ಪ್ರಥಮಬಹುಮಾನಕ್ಕೆ ಭಾಜನವಾಗಿವೆ.
ಕೊಡಗು ಜಿಲ್ಲೆಯ ಕಿಗ್ಗಾಲು ಗ್ರಾಮದ ನಿವಾಸಿ ಕಿಗ್ಗಾಲು ಗಿರೀಶ್ ರವರು 1951ರ ಡಿಸೆಂಬರ್ 24 ರಂದು ಶ್ರೀನಿವಾಸ ರಾಜಲಕ್ಷ್ಮಿ ಹವ್ಯಕದಂಪತಿಗಳ ದ್ವಿತೀಯ ಪುತ್ರನಾಗಿ ಕಿಗ್ಗಾಲುವಿನಲ್ಲಿ ಜನಿಸಿದರು. ಮೂರ್ನಾಡುವಿನಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣವನ್ನು ಪಡೆದ ಇವರು ಮಡಿಕೇರಿಯ ಅಂದಿನ ಸರಕಾರೀ ಕಾಲೇಜಿನಲ್ಲಿ ಬಿ.ಎಸ್ ಸಿ ಪದವಿಯನ್ನು ಗಳಿಸಿದರು.ಅನಂತರ,ಭಾರತೀಯ ವಾಯುಪಡೆಗೆ ಆಯ್ಕೆಯಾಗಿ,ಗುಜರಾತಿನ ಭುಜ್ ಪಟ್ಟಣದಲ್ಲಿ ವಾಯುಸೇನಾ ಕರ್ತವ್ಯಕ್ಕಿಳಿದರು. ವಿದ್ಯಾರ್ಥಿಯಾಗಿರುವಾಗಲೇ ಸುಧಾ,ಪ್ರಜಾವಾಣಿ ಮುಂತಾದ ನಿಯತಕಾಲಿಕಗಳಿಗೆ ಬರೆಹಗಳನ್ನು ನೀಡುತ್ತಿದ್ದ ಇವರು ವಾಯುಪಡೆಯಲ್ಲಿಯೂ ಲೇಖನಗಳನ್ನು ಬರೆಯುತ್ತಿದ್ದರು.ಆಗ್ರಾ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲಭಾಷೆಯಲ್ಲಿ ಎಮ್ ಏ ಪದವಿ ಗಳಿಸಿ,ಹದಿನೇಳು ವರ್ಷ ಸೇವೆಮಾಡಿ ಅನಂತರ ಸೇನೆಯಿಂದ ನಿವೃತರಾದರು. ಮಡಿಕೇರಿ ಆಕಾಶವಾಣಿಯಲ್ಲಿ ...
READ MORE