ಶೆಲ್ಲಿ ಕೂಡ್ಲಿಗಿ ಅವರ ಕಥಾ ಸಂಗ್ರಹ ‘ಹಥೇಲಿ’. ಒಟ್ಟು 8 ಕಥೆಗಳೀರುವ ಈ ಸಂಕಲನದಲ್ಲಿ ಒಂದೊಂದು ಕಥೆಯೂ ವಾಸ್ತವಿಕ ಬದುಕಿನ ಸಣ್ಣ ಸಣ್ಣ ತಂತುಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಬಂದಿವೆ.ಸೂಕ್ಷ್ಮ ಸಂವೇದನೆಗಳ ಸಂಪೂರ್ಣ ಚಿತ್ರಣ ಈ ಕಥೆಗಳಲ್ಲಿವೆ.ಕೆಲವು ನಗು ತರಿಸಿದರೆ ಇನ್ನೂ ಕೆಲವು ಎದೆಯೊಳಗೆ ಭಾವುಕತೆಯ ಥ್ರಿಲ್ ಕೊಟ್ಟಿವೆ. ಹೆಣ್ಣು, ಸಂಸಾರ, ಸಮಾಜದ ರೀತಿ ನೀತಿ, ಪ್ರೇಮ, ದುಃಖಗಳ ಹಂದರದೊಳಗೆ ಇಣುಕಿ ಮಿಣುಕುವ ಕಥೆಗಳು ಓದುಗರನ್ನು ಕುತೂಹಲದೊಂದಿಗೆ ಪಯಣಿಸಲು ಸ್ಪೂರ್ತಿ ತುಂಬುತ್ತವೆ.ಸಂವೇದನಾಯುಕ್ತ ಮಾಹಿತಿಯ ನಡುವೆ ಬಹಳ ಕಾಲ ನಮ್ಮನ್ನು ಹಿಡಿದಿಡುತ್ತವೆ. ಕೇವಲ ಆಧುನಿಕ ಯಾಂತ್ರಿಕ ಬದುಕಿನ ಗೊಂದಲ ಗೋಜಲುಗಳ ಬಂಧನದಲ್ಲಿ ಬದುಕುತ್ತಿರುವ ನಮ್ಮನ್ನು ಕೆಲ ಸಮಯದವರೆಗೆ ಬಾಲ್ಯ ಯೌವ್ವನ ಹಾಗೂ ಮುಪ್ಪಿನ ಕಾಲದ ಸನ್ನಿವೇಶಗಳತ್ತ ಈ ಕಥೆಗಳು ಚಿಂತನೆಗೆ ಎಡೆ ಮಾಡಿ ಕೊಡುತ್ತವೆ.
ಈ ಕೃತಿಗೆ ಶ್ರೀ ಗಣಪತಿ ಹೆಗಡೆ ದಾಂಡೇಲಿಯವರು ಮುನ್ನುಡಿ ಬರೆದಿದ್ದರೆ ಹಿರಿಯ ಬರಹಗಾರರಾದ ಶ್ರೀ ಮುದಲ್ ವಿಜಯ್ ಬೆಂಗಳೂರು ಅವರ ಬೆನ್ನುಡಿಯಿದೆ.
ಮಣೆಗಾರ್ ಶೆಕ್ಷಾವಲಿ ಎಂಬುದು ಇವರ ಪೂರ್ಣ ಹೆಸರು. ತಮ್ಮ ಹೆಸರಿನ (ಶೆ)ಕ್ಷಾವ(ಲಿ) ಮೊದಲ ಮತ್ತು ನಾಲ್ಕನೇ ಅಕ್ಷರ ಸೇರಿಸಿ ಜೊತೆಗೆ ಹುಟ್ಟೂರಿನ ಮೇಲಿನ ಅಭಿಮಾನದಿಂದ "ಶೆಲ್ಲಿ ಕೂಡ್ಲಿಗಿ" ಎಂಬ ಕಾವ್ಯನಾಮದ ಮೂಲಕ ನಾನು ಕೃತಿಗಳನ್ನು ರಚಿಸುತ್ತಿರುವೆ. ತಂದೆ ಅಬ್ದುಲ್ ರೋಫ್ ತಾಯಿ ಜಮಿಲಾ ಬೀ. ಪ್ರಾಥಮಿಕ ಶಿಕ್ಷಣ ಹುಟ್ಟೂರು ಕೂಡ್ಲಿಗಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ 1992ನೇ ಸಾಲಿನಿಂದ ಆರಂಭವಾಯಿತು. 1999ರಿಂದ ಪ್ರೌಢ ಶಿಕ್ಷಣನ್ನು ಅದೇ ಊರಿನ ಐತಿಹಾಸಿಕ ಶಾಲೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾಯಿತು. ಹೊಸಪೇಟೆ(ಪ್ರಸ್ತುತ ವಿಜಯನಗರ)ಯ ನೈಸೆಟ್ ...
READ MORE