ಬದುಕಿನ ಕೌರ್ಯ ತಂದುಕೊಡುವ ವಿವೇಕ ಹಾಗೂ ತಾಳ್ಮೆಗಳನ್ನು ಪಡೆದುಕೊಳ್ಳುವ ‘ಹಸಿರು ಬೆಟ್ಟ ’ ಕಥಾ ಸಂಕಲನದ ಕಥಾ ಪಾತ್ರಗಳು ಬದುಕಿನಲ್ಲಿ ಕಾಲೂರಿ ನಿಲ್ಲಲು ಪ್ರಯತ್ನಿಸುತ್ತವೆ. ಕೃತಿಗೆ ಬೆನ್ನುಡಿ ಬರೆದಿರುವ ಬಾಳಾಸಾಹೇಬ ಲೋಕಾಪುರ ಅವರು “ಹತಾಶೆಯ ತೆಕ್ಕೆಯಲ್ಲಿ ತಮ್ಮನ್ನು ತಾವು ದೂಡಿಕೊಂಡ ಪಾತ್ರಗಳು ವಿಧಿಯ ಎದುರಾಗಿ ಉಸಿರು ಬಿಡುತ್ತವೆ. ಬದುಕಿನ ಅಹೋಬಂಧನದಿಂದ ಬಿಡಿಸಿಕೊಳ್ಳುವ ತವಕ ತಲ್ಲಣಗಳು ಇಲ್ಲಿವೆ. ನಾರಾಯಣರ ಸಂವೇದನೆ ಜಾತಕೇಂದ್ರದಿಂದ ಅಜ್ಞಾತ ಸಂವೇದನೆಯನ್ನು ಹುಡುಕುವುದರಲ್ಲಿ ಇದೆ. ಜಗತ್ತಿನಲ್ಲಿ ಕಾಣುವುದೆಲ್ಲ ಜಾತವೇ. ಆದರೆ ಕಥೆಯಲ್ಲಿ ಸಿಟ್ಟು, ಕೌರ್ಯ, ಪ್ರೀತಿ, ಅನುಕಂಪ, ಮುಗ್ಧತೆ ಇವೆಲ್ಲ ತಂತಾನೆ ತೆರೆದುಕೊಳುತ್ತಾ ನಮ್ಮನ್ನು ಅನೂಹ್ಯ ಲೋಕಕ್ಕೆ ಕೊಂಡೊಯ್ಉವ ಕಲೆಗಾರಿಕೆ ನಾರಾಯಣರ ಕಥೆಗಳ ಸತ್ಯವಾಗಿದೆ” ಎಂದು ಪ್ರಶಂಸಿಸಿದ್ದಾರೆ.
ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...
READ MORE