‘ಹಂಸೆ ಹಾರಿತ್ತು’ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರ ಕಥಾ ಅಂಕಲನ. ಲೇಖಕ ರಹಮತ್ ತರೀಕೆರೆ ಅವರು ಬೆನ್ನುಡಿ ಬರೆದಿದ್ದಾರೆ. ಇಲ್ಲಿನ ಕತೆಗಳನ್ನು ಓದುವುದೆಂದರೆ ತುಂಗಭದ್ರೆಯ ಭರತಿಯಲ್ಲಿ ಈಸು ಬಿದ್ದಂತೆ, ಒಮ್ಮೆ ಹೊನ್ನಾಳಿ, ನ್ಯಾಮತಿ ಸೀಮೆಯ ಜೀವಂತ ಬದುಕಿನ ಅಲೆ ಬಂದು ಹಾಯುತ್ತವೆ ಎನ್ನುತ್ತಾರೆ.
ಬಿದರಹಳ್ಳಿ ನರಸಿಂಹಮೂರ್ತಿ ಅವರು ತಮ್ಮ ಮೊದಲ ಸಂಕಲನ ‘ಶಿಶುಕಂಡ ಕನಸುವಿನಲ್ಲಿ’ ಆರಂಭಿಸಿದ ದಾರ್ಶನಿಕ ಹುಡುಕಾಟವನ್ನು ಇಲ್ಲಿಯೂ ಮುಂದುವರೆಸಿದ್ದಾರೆ. ಇದೊಂದು ತಾಯ್ತನದ ಬಾಹುಗಳಲ್ಲಿ ಲೋಕದ ಎಲ್ಲ ವಿಷಮತೆ ವೈರುಧ್ಯಗಳನ್ನು ಬಾಚಿ ತಬ್ಬಿಕೊಂಡು ಬಿರುಕೇ ಇಲ್ಲದ ಸಾಮರಸ್ಯವನ್ನು ಕಾಣಿಸಬೇಕೆಂಬ ಹಠಮಾರಿ ದಾರ್ಶನಿಕತೆ ಇಲ್ಲಿದೆ. ಆಧುನಿಕ ಬದುಕಿನ ಕೋಲಾಹಲವನ್ನೂ, ವಿಸ್ಮಯಗಳನ್ನೂ ರೂಪಕಾತ್ಮಕವಾದ ಕನ್ನಡಿಯಲ್ಲಿ ಕಾಣಿಸುವ ಹೊಸಕಥನ ಕ್ರಮವನ್ನು ಹುಟ್ಟಿಸಲು ಹವಣಿಸುತ್ತಿರುವವರು ಅನಿಸುತ್ತದೆ ಎಂದು ಪ್ರಶಂಸಿಸಿದ್ದಾರೆ.
ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು: ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001), ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...
READ MORE