ಕಥೆಗಾರ, ಬರಹಗಾರರಾದ ವಸುಧೇಂದ್ರ ಅವರ ಕಥಾ ಸಂಕಲನ ’ಹಂಪಿ ಎಕ್ಸ್ ಪ್ರೆಸ್’.ಸಮಕಾಲೀನ ವಿಷಯಗಳನ್ನು ತಮ್ಮ ಕಥೆಯ ವಸ್ತುವನ್ನಾಗಿಸುತ್ತ ಹೆಣೆದಿರುವ ಕಥೆಗಳ ಗುಚ್ಛ ಈ ಕೃತಿ.
ಈ ಕೃತಿಯಲ್ಲಿನ ಒಂದು ಕತೆಯ ಪಾತ್ರವಾಗಿ ಬರುವ ಈರಪ್ಪ ಎನ್ನುವ ಕೆಲಸದ ಆಳು ಕಟ್ಟಿದ ಏಳು ಸರ್ಪದ ಕಟ್ಟುಕತೆ ಕಾಲಾನುಸಾರ ಆತನ ವಿವೇಚನೆಗೆ ನಿಲುಕದ ಹಾಗೇ ನಿಜವಾಗುತ್ತದೆ. ಈರಪ್ಪನ ಮಾತು ಕಾಲಾನುಸಾರ ಸತ್ಯವಾಗಿಬಿಡುತ್ತದೆ. ಭೂಮಿಯೇ ನಿಧಿಯಾಗಿ., ಅದನ್ನು ಮಾರಿದವರು ಊರಿಗೆ ದಣಿಯಾಗುತ್ತಾರೆ. ಮೈನ್ಸ್ ಇಂದ ಎದ್ದ ಧೂಳು ಗಿಣಿಯ ಮೇಲೆ ಚೆಲ್ಲಿ, ಹಸಿರು ಗಿಣಿ ಕೆಂಪು ಗಿಣಿಯಂತೆ ಕಂಡದ್ದನ್ನು ಕತೆಗಾರ ವಿಷಾದದಿಂದ ಹೇಳುತ್ತಾರೆ. ಹೀಗೆ ವಾಸ್ತವಕ್ಕೆ ಹತ್ತಿರವಿರುವ, ಸಮಕಾಲೀನ ತಲ್ಲಣಗಳನ್ನು ಎದುರಿಸುತ್ತಿರುವ ಅನೇಕ ವಸ್ತುಗಳನ್ನು ಕತೆಗಾರ ವಸುಧೇಂದ್ರ ಓದುಗರಿಗೆ ಈ ಕೃತಿಯಲ್ಲಿ ನೀಡಿದ್ದಾರೆ. ಈ ಕೃತಿಗೆ ಮಾಸ್ತಿ ಕಥಾ ಪುರಸ್ಕಾರ, ಬೇಂದ್ರೆ ಪುಸ್ತಕ ಬಹುಮಾನ ಮತ್ತು ವಸುದೇವ ಭೂಪಾಲಂ ಪ್ರಶಸ್ತಿ ದೊರಕಿದೆ.
ವಸುಧೇಂದ್ರ ಅವರು ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು. ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1969ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಆನಂತರ ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಯ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ. ಸುಮಾರು 20 ವರ್ಷಗಳ ಕಾಲ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅವರು ಸದ್ಯ ಬೆಂಗಳೂರಿನಲ್ಲಿ ವಾಸವಿದ್ದು, ಸದ್ಯಕ್ಕೆ ಸಾಹಿತ್ಯಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ ...
READ MORE