`ಎಚ್.ವಿ. ಸಾವಿತ್ರಮ್ಮ ಸಮಸ್ತ ಕಥೆಗಳು' ನ.ರವಿಕುಮಾರ್ ಮತ್ತು ಎಲ್.ಜಿ ಮೀರಾ ಅವರು ಸಂಪಾದಿಸಿರುವ ಕೃತಿಯಾಗಿದೆ. ಇಲ್ಲೊಂದು ಕಥೆ ಇದೆ. ಯಾವುದೋ ಕಾರಣಕ್ಕೆ ಹೆಂಡತಿಯನ್ನು ಕೊಲೆ ಮಾಡಿದ ಗಂಡನೊಬ್ಬ ಕಟಕಟೆಯಲ್ಲಿ ನಿಂತಿದ್ದಾನೆ. ಅವನ ಕಡೆಯ ವಕೀಲ ಕೊಲೆ ಮಾಡಿಯೇ ಇಲ್ಲ ಎಂದು ವಾದಿಸುತ್ತಾನೆ. ಮೂಲಭೂತವಾಗಿ ಅವಳು ಕೊಲೆಯಾಲಲ್ಲ ಬದುಕಿದ್ದಾಳೆ ಎಂದೇ ವಾದಿಸುತ್ತಾರೆ. 'ನೋಡಿ ಲಕ್ಷ್ಮೀ ಇದೇ ಬಾಲಅನಿಂದ ಬರುತ್ತಾಳೆಂದು ಹೇಳುತ್ತಾರೆ'. ಎಲ್ಲರೂ ಆ ಬಾಲಅನತ್ತ ದೃಷ್ಟಿ ಹಲಸುತ್ತಾರೆ. ಇವನು ನಿರಪರಾಧಿ ಎಂದು ಷರಾ ಬರೆಯುತ್ತಾರೆ ಎಂದುಕೊಳ್ಳುತ್ತಾರೆ. ಆದರೆ ನ್ಯಾಯವಾದಿ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸುತ್ತಾರೆ. ಕಾರಣ ಎಲ್ಲರೂ ಬಾಲಅನ ಕಡೆ ತಿರುಣದಾಗ ಅಪರಾಧಿ ತಿರುಗದಿರುವುದನ್ನು ನ್ಯಾಯಾದೀಶರು ಗಮನಿಸಿರುತ್ತಾರೆ.ಇಂಥ ಸೂಕ್ಷ್ಮ ಸಂಗತಿಗಳಲ್ಲಿ, ವಿವರಗಳಲ್ಲಿಯೇ ಸಾವಿತ್ರಮ್ಮನವರ ಕಥೆಗಳು ಅನನ್ಯವಾಗುವುದು. ಇದೊಂದು ಉದಾಹರಣೆ ಅಷ್ಟೆ. ಇಂಥ ಹಲವು ಸಂಗತಿಗಳನ್ನು ನಾವು ಅವರ ಎಲ್ಲ ಕಥೆಗಳಲ್ಲಿ ನೋಡಬಹುದು. ಈ ಕಥೆಗಳು ಹೆಣ್ಣೂಬ್ಬಳ ಅಂತಃಕರಣದ ಭಾವನೆಗಳ/ಕಲ್ಪನೆಗಳ ದಾಖಲೆ ಎಂದು ಮಾತ್ರ ನೋಡದೆ ಮನುಷ್ಯನ ಮನಸ್ಸು ಬೇರೆ ಬೇರೆ ಸಂದರ್ಭಗಳಲ್ಲಿ, ಸಮಯಗಳಲ್ಲಿ ಹೇಗೆ ವರ್ತಿಸುತ್ತದೆ, ಪ್ರತಿಕ್ರಿಯಿಸುತ್ತದೆ, ಸಮಾಜ ಹೇಗೆ ನೋಡುತ್ತದೆ, ಅದನ್ನು ಮೀರಲು ಯಾವ ಉಪಾಯಗಳನ್ನು ಮನಸ್ಸು ಹೂಡುತ್ತದೆ ಮುಂತಾಲ ನೋಡಬಹುದು. ಹೀಗಾಗಿ ಇದು ಒಂದು ಕಾಲಘಟ್ಟದ, ಸಮಾಜದ, ಹೆಣ್ಣಿನ ಮನಃಸ್ಥಿತಿಯ, ಸಾಮಾಜಿಕ ವ್ಯವಸ್ಥೆಯ ದಾಖಲೆಯಾಗದೆ ಒಟ್ಟು ಮನುಷ್ಯ ಸ್ವಭಾವವನ್ನು ಅಲಯುವ ಸಾಮಯಾಣ ಎಂದು ಭಾವಿಸಬೇಕಿದೆ.