ಗುಮ್ಮನ ಕರೆಯದಿರಿ

Author : ಬಿ. ರಾಮಚಂದ್ರ ಆಚಾರ್ಯ

Pages 280

₹ 225.00




Year of Publication: 2016
Published by: ಶ್ರೀರಾಮ ಪ್ರಕಾಶನ
Address: ನಂ.893/ಡಿ, 3ನೇ ತಿರುವು, ನೆಹರೂ ನಗರ, ಮಂಡ್ಯ- 571401
Phone: 9448930173

Synopsys

‘ಗುಮ್ಮನ ಕರೆಯದಿರಿ’, ಬಿ. ರಾಮಚಂದ್ರ ಆಚಾರ್ಯ ಅವರ ಕಥೆಗಳು ಮತ್ತು ಲೇಖನಗಳ ಸಂಕಲನ. ಪುಸ್ತಕದ ಮೊದಲನೆಯ ಭಾಗ; ರಾಮಚಂದ್ರ ಆಚಾರ್ಯರ ಕೆಲವು ಕಥೆಗಳು ಮತ್ತು ಎರಡನೆಯ ಭಾಗ; ಲೇಖನಗಳು ಇವೆ. ಒಂದನೆಯ ಭಾಗ 'ಆಚಾರ', ಎರಡನೆಯ ಭಾಗ “ವಿಚಾರ. ಈ ಆಚಾರ ವಿಚಾರಗಳೆಲ್ಲ ಒಂದು ನಿರ್ದಿಷ್ಟ ಚಿಂತನೆ - ಆ ನಿಟ್ಟಿನ ಅನುಭವಗಳನ್ನು ಆಧರಿಸಿವೆ ಎಂಬುದು ಲೇಖಕರ ಅಭಿಪ್ರಾಯ.

ಅಧ್ಯಾತ್ಮಿಕ ಸಾಹಿತ್ಯ ಅಧ್ಯಯನ ಜೊತೆಗೆ ಜ್ಯೋತಿಷ, ವಾಸ್ತುಶಾಸ್ತ್ರ, ಜಲಶೋಧನೆ ಇತ್ಯಾದಿ ಈ ವಲಯಗಳಲ್ಲಿ ಲೇಖಕರಿಗೆ ಆಸಕ್ತಿ. ಈ ಎಲ್ಲ ಸಂಗತಿಗಳಲ್ಲಿ ಕಾಣಸಿಗುವ ವೈಚಿತ್ರವೆಂದರೆ ಮಾರ್ಗದರ್ಶಕ ಮತ್ತು ಅನುಯಾಯಿ ಇಬ್ಬರಿಗೂ ಈ ಶಾಸ್ತ್ರಗಳ ಮೂಲ ತತ್ವ ಏನೆಂದು ತಿಳಿಯದಿರುವುದೇ ಆಗಿದೆ. ಹಾಗಾಗಿ, ಲೇಖಕರು ಅವರ ಚಿಂತನೆಗಳನ್ನು ಅನುಭವ ಹಾಗೂ ಚಿಂತನೆಯ ರೂಪದಲ್ಲಿಯೂ ದಾಖಲಿಸಿದ್ದಾರೆ. ತಾವು 70 ರ ದಶಕದಲ್ಲಿ 'ಸುಧಾ' ಮತ್ತು 'ಮಯೂರ' ಪತ್ರಿಕೆಗಳಲ್ಲಿ ನಿಯಮಿತವಾಗಿ ಕಥೆ ಬರೆಯುತ್ತಿದ್ದು, ಈ ಹಿನ್ನೆಲೆಯಿಂದಾಗಿ ಕೆಲವು ಅನುಭವಗಳು ಕಥನರೂಪ ತಾಳಿದವು ಎನ್ನುತ್ತಾರೆ ಲೇಖಕರು.

Related Books